ಬೆಂಗಳೂರು; ಮಹಿಳೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳ ಬಂಧನ

ಕದ್ದ ಮೊಬೈಲ್ ನಲ್ಲಿದ್ದ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡುತ್ತಿದ್ದ...
ಬಂಧಿತ ವಿದ್ಯಾರ್ಥಗಳು
ಬಂಧಿತ ವಿದ್ಯಾರ್ಥಗಳು

ಬೆಂಗಳೂರು: ಕದ್ದ ಮೊಬೈಲ್ ನಲ್ಲಿದ್ದ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಬಿಬಿಎಂ ವಿದ್ಯಾರ್ಥಿ ಅಶ್ವಿನ್ ಮೋಸಸ್, ಸಿವಿಲ್ ಎಂಜಿನೀಯರಿಂಗ್ ವಿದ್ಯಾರ್ಥಿಅಕ್ಷಯ್ ಡೇವಿಡ್, ಕಿರಣ್ ಅಲಿಯಾಸ್ ಕಡ್ಡಿ ಎಂಬ ವಿದ್ಯಾರ್ಥಿಗಳು ಒಂದು ಲಕ್ಷ ರುಪಾಯಿಗಾಗಿ ಬೇಡಿಕೆ  ಇಟ್ಟಿದ್ದರು. ಮೂವರು ಹೊಸಪಾಳ್ಯದಲ್ಲಿರುವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಅಕ್ಟೋಬರ್ 4 ರಂದು ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಹೊಸೂರು ರಸ್ತೆಯಲ್ಲಿರುವ ಹೋಟೆಲ್ ಗೆ ತೆರಳಿದ್ದ. ಈ ವೇಳೆ ಅದೇ ಹೋಟೆಲ್ ಗೆ ತೆರಳಿದ್ದ ಅಕ್ಷಯ್, ಅಶ್ವಿನ್ ಮತ್ತು ಕಿರಣ್ ದೂರುದಾರ ವಿದ್ಯಾರ್ಥಿಯಿಂದ ಮೊಬೈಲ್ ಕದ್ದಿದ್ದರು. ಮೂರು ದಿನಗಳ ನಂತರ ವಿದ್ಯಾರ್ಥಿಯ ಮೊಬೈಲ್ ನಲ್ಲಿ ಆತ ಮತ್ತು ಸ್ನೇಹಿತೆ ನಡೆಸಿದ್ದ ಸಂಭಾಷಣೆಯ ವಿಡಿಯೋ ಚಾಟ್ ಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುವುದಾಗಿ ದೂರುದಾರ ವಿದ್ಯಾರ್ಥಿಯ ಸ್ನೇಹಿತೆಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದಾರೆ. ಆದರೆ ಆಕೆ ಇದನ್ನು ನಿರ್ಲಕ್ಷ್ಯಿಸಿದ್ದಾಳೆ. ಒಂದು ಲಕ್ಷ ಹಣ ನೀಡದಿದ್ದರೇ ವಿಡಿಯೋವನ್ನು ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಈ ಸಂಬಂಧ ಡಿಸೆಂಬರ್ 1 ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ದೂರು ದಾಖಲಿಸಿದ್ದಾನೆ. ಮತ್ತೆ ಆರೋಪಿಗಳಿಗೆ ಕರೆ ಮಾಡಿ 50 ಸಾವಿರ ರುಪಾಯಿ ನೀಡುವುದಾಗಿ, ಸಿಂಗಸಂದ್ರ ಬಳಿಯಿರುವ ಗಣೇಶ ದೇವಾಲಯಕ್ಕೆ ಬರುವಂತೆ ಹೇಳಿದ್ದಾನೆ. ಶನಿವಾರ ಸಂಜೆ ಮೂವರು ಬೈಕ್ ನಲ್ಲಿ ಸಿಂಗಸಂದ್ರ ಬಳಿ ಬಂದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಡ್ರಗ್ಸ್ ದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಮೂವರು ತಪ್ಪೊಪ್ಪಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com