ಭೀಮಾ ನಾಯಕ್ ವಿರುದ್ಧ ತನಿಖೆಗೆ ಸರ್ಕಾರದ ಅನುಮತಿ ಕೋರಿ ಪೊಲೀಸರ ಪತ್ರ

ಬೆಂಗಳೂರು ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯಕ್ ಅವರ ವಿರುದ್ಧ ತನಿಖೆ ನಡೆಸಲು ಪೊಲೀಸರು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ...
ಚಾಲಕ ರಮೇಶ್ ಮತ್ತು ಅಧಿಕಾರಿ ಭೀಮಾ ನಾಯಕ್
ಚಾಲಕ ರಮೇಶ್ ಮತ್ತು ಅಧಿಕಾರಿ ಭೀಮಾ ನಾಯಕ್

ಮೈಸೂರು: ಬೆಂಗಳೂರು ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯಕ್ ಅವರ ವಿರುದ್ಧ ತನಿಖೆ ನಡೆಸಲು ಪೊಲೀಸರು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ. ಈ ಸಂಬಂಧ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಒಂದು ವೇಳೆ ಸರ್ಕಾರ ಒಪ್ಪಿಗೆ ನೀಡಿದರೆ ತನಿಖೆ ಕೈಗೆತ್ತಿಕೊಳ್ಳುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನೂ ಘಟನೆ ನಡೆದ ದಿನದಿಂದ ಭೀಮಾ ನಾಯಕ್ ನಾಪತ್ತೆಯಾಗಿದ್ದು, ಮಂಡ್ಯ ಪೊಲೀಸರು ಭೀಮಾನಾಯಕ್ ಬಗ್ಗೆ ಮಾಹಿತಿ ಕಲೆ ಹಾಕಲು ಮೂರು ತಂಡಗಳನ್ನು ರಚಿಸಲಾಗಿದೆ.

ಮಳವಳ್ಳಿ ಡಿವೈಎಸ್ ಪಿ ಮ್ಯಾಥ್ಯೂ ಥಾಮಸ್ ನೇತೃತ್ವದ ತಂಡ, ಬೆಂಗಳೂರು,ಬಳ್ಳಾರಿ, ಮದ್ದೂರು ಮತ್ತು ಕಾಡಕೊತ್ತನಹಳ್ಳಿಗೆ ತೆರಳಿದ್ದು ಭೀಮಾ ನಾಯಕ್ ಮತ್ತು ಅವರ ಚಾಲಕ ಮೊಹಮದ್ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಮೃತ ಚಾಲಕ ರಮೇಶ್ ಭೀಮಾ ನಾಯಕ್ ಬಳಿ 100 ಕೋಟಿ ರು ಆಸ್ತಿ ಇದೆ ಎಂದು ಮಾಡಿರುವ ಆರೋಪ ಸಂಬಂಧ ಎಲ್ಲೆಲ್ಲಿ ಹಣ ಹೂಡಿಕೆ ಮಾಡಿದ್ದಾರೆ, ಯಾರ್ಯಾರ ಹೆಸರಲ್ಲಿ ಹಣ ಇದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ.

ಇನ್ನು ರಮೇಶ್ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಿಂದ ಡ್ರೈವಿಂಗ್ ಲೈಸೆನ್ಸ್,  ಎಟಿಎಂ ಕಾರ್ಡ್ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು ಎಂದು ಮಂಡ್ಯ ಎಸ್ ಪಿ ಸುದೀಂದ್ರ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com