ಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣ: ಕೆಎಎಸ್ ಅಧಿಕಾರಿ ಭೀಮಾನಾಯಕ್ ಬಂಧನ

ಗಣಿ ಧಣಿ ಜನಾರ್ದನ ರೆಡ್ಡಿ ಮಗಳ ಮದುವೆಗೆ ಕಪ್ಪು ಹಣವನ್ನು ಬಿಳಿಯಾಗಿಸಿಕೊಟ್ಟಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬೆಂಗಳೂರಿನ ವಿಶೇಷ ಭೂ ...
ಚಾಲಕ ರಮೇಶ್ ಮತ್ತು ಅಧಿಕಾರಿ ಭೀಮಾ ನಾಯಕ್
ಚಾಲಕ ರಮೇಶ್ ಮತ್ತು ಅಧಿಕಾರಿ ಭೀಮಾ ನಾಯಕ್

ಕಲಬುರಗಿ: ಗಣಿ ಧಣಿ ಜನಾರ್ದನ ರೆಡ್ಡಿ ಮಗಳ ಮದುವೆಗೆ ಕಪ್ಪು ಹಣವನ್ನು ಬಿಳಿಯಾಗಿಸಿಕೊಟ್ಟಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮಾ ನಾಯಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ,

ಮಂಡ್ಯ ಹಾಗೂ  ಕಲಬುರಗಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ನಡೆಸಿ ಭಾನುವಾರ ಬೆಳಗ್ಗೆ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಕಲಬುರಗಿಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಭೀಮಾ ನಾಯಕ್ ವಿಚಾರಣೆ ನಡೆಸಲಾಗುತ್ತಿದೆ.

ಬೆಂಗಳೂರು ವಿಶೇಷ ಭೂಸ್ವಾಧೀನ ಅಧಿಕಾರಿ ಭೀಮಾ ನಾಯ್ಕ್ ಅವರ ಕಚೇರಿಯಲ್ಲಿ ಕಾರು ಚಾಲಕ ಆಗಿರುವ ರಮೇಶ್ ಗೌಡ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದು,  17 ಪುಟಗಳ ಡೆತ್ ನೋಟ್ ನಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಹೆಸರು ಪ್ರಸ್ತಾಪ ಮಾಡಿದ್ದರು.ಡಿಸೆಂಬರ್ 6 ರಿಂದ ಭೀಮಾನಾಯಕ್ ನಾಪತ್ತೆಯಾಗಿದ್ದರು.

ಜನಾರ್ದನ ರೆಡ್ಡಿಯ ಸುಮಾರು 100 ಕೋಟಿ ರೂಪಾಯಿಯಷ್ಟು ಕಪ್ಪು ಹಣವನ್ನು ಭೀಮಾನಾಯ್ಕ್ ಅವರು ಶೇ.20ರಷ್ಟು ಕಮಿಷನ್ ಪಡೆದು ವೈಟ್ ಆಗಿ ಮಾಡಿಕೊಟ್ಟಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದರು. ಆ ಬಳಿಕ ಭೀಮಾ ನಾಯ್ಕ ತಲೆ ಮರೆಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com