ಶಾಲೆಯಲ್ಲಿ ಮಗು ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ, ಪೆನ್ಸಿಲ್ ನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಾವರದ ಶಾಲೆಯ ಆವರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಐದು ವರ್ಷದ ಬಾಲಕಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಾವರದ ಶಾಲೆಯ ಆವರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪ ಕೇಳಿಬಂದಿತ್ತು. ಆದರೆ ಅದು ಲೈಂಗಿಕ ದೌರ್ಜನ್ಯ ಅಲ್ಲ. ಅವಳ ಕ್ಲಾಸ್ ಮೆಟ್ ಹುಡುಗನ ಕಿತಾಪತಿ ಎಂಬುದು ಸಿಸಿಟಿವಿ ದೃಶ್ಯಗಳಿಂದ ಬಹಿರಂಗವಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಶಾಲೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಈ ವೇಳೆ ಬಾಲಕನೊಬ್ಬ ಎಲ್ ಕೆಜಿ ಬಾಲಕಿಯ ಖಾಸಗಿ ಅಂಗಾಂಗಳಿಗೆ ಪೆನ್ಸಿಲ್ ನಿಂದ ಚುಚ್ಚುತ್ತಿರುವುದು ಪತ್ತೆಯಾಗಿದೆ. ನಂತರ ಇದು ಲೈಂಗಿಕ ದೌರ್ಜನ್ಯ ಪ್ರಕರಣ ಅಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಸೋಮವಾರ ಶಾಲೆಯಿಂದ ಮನೆಗೆ ಹೋದ ಬಾಲಿಕ ತನ್ನ ಖಾಸಗಿ ಅಂಗಾಂಗದಲ್ಲಿ ನೋವು ಕಾಣಿಸಿಕೊಂಡಿರುವುದನ್ನು ಪೋಷಕರಿಗೆ ತಿಳಿಸಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಪಾಸಣೆಯ ನಂತರ ವೈದ್ಯರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ತಿಳಿಸಿದ್ದಾರೆ. ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಪೋಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೋಸ್ಕೊ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡ ಕೆಜಿ ಹಳ್ಳಿ ಪೊಲೀಸರು, ತಕ್ಷಣ ಶಾಲೆಗೆ ತೆರಳಿ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಈ ವೇಳೆ ಬಾಲಕ ಸುಮಾರು ಆರು ನಿಮಿಷಗಳ ಕಾಲ ಬಾಲಕಿಯ ಖಾಸಗಿ ಭಾಗಕ್ಕೆ ಪೆನ್ಸಿಲ್ ನಿಂದ ಚುಚ್ಚಿರುವುದು ಪತ್ತೆಯಾಗಿದೆ. ಇದನ್ನು ಪೋಷಕರು ಸಹ ನೋಡಿದ್ದು, ಇದು ಲೈಂಗಿಕ ದೌರ್ಜನ್ಯ ಅಲ್ಲ ಎಂದು ಮನವರಿಕೆ ಮಾಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿರುವ ಶಾಲಾ ಸಿಬ್ಬಂದಿ, ಶಾಲಾ ಆವರಣದಲ್ಲಿ ಅಂತಹ ಘಟನೆ ನಡೆದಿರುವ ಬಗ್ಗೆ ಸಿಸಿಟಿವಿ ದೃಶ್ಯ ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಶಾಲಾ ಅಭಿವೃದ್ಧಿಯನ್ನು ಸಹಿಸಿಕೊಳ್ಳದ ಕೆಲವರು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿರುವ ಶಾಲಾ ಸಿಬ್ಬಂದಿ, ಎಲ್ಲಾ ವಿವವರನ್ನು ಪೊಲೀಸರಿಗೆ ನೀಡಿದ್ದು, ಅವರು ತನಿಖೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಶಾಲೆ ಸೂಕ್ತ ಭದ್ರತೆ ಮತ್ತು ಕ್ಲಾಸ್ ರೂಂ ಸೇರಿದಂತೆ ಹಲವು ಕಡೆ ಸಿಸಿಟಿವಿಯನ್ನು ಅಳವಡಿಸಿದ್ದು, ಇದು ನಮಗೆ ತನಿಖೆಗೆ ಸಹಕಾರಿಯಾಯಿತು ಎಂದಿರುವ ಪೊಲೀಸರು, ತನಿಖೆಯನ್ನು ಆಧರಿಸಿ ಕೋರ್ಟ್ ಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com