ಕೋಮು ಸಾಮರಸ್ಯಕ್ಕೆ ಹೆಚ್ಚಿನ ಒತ್ತು ನೀಡಿ: ದಿಗ್ವಿಜಯ್ ಸಿಂಗ್

ಹಿಂದೂ-ಮುಸ್ಲಿಮರ ಬಾಂಧವ್ಯಕ್ಕೆ ಅಷ್ಫಾಖ್‌ ಉಲ್ಲಾ ಖಾನ್‌ ಹಾಗೂ ಪಂಡಿತ್‌ ರಾಮ್‌ ಪ್ರಸಾದ್‌ ಬಿಸ್ಮಿಲ್‌ ಉತ್ತಮ ಉದಾಹರಣೆ ಎಂದು ಎಐಸಿಸಿ ಪ್ರಧಾನ ...
ಕೋಮು ಸೌಹಾರ್ದ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ದಿಗ್ವಿಜಯ್ ಸಿಂಗ್
ಕೋಮು ಸೌಹಾರ್ದ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ದಿಗ್ವಿಜಯ್ ಸಿಂಗ್
Updated on

ಬೆಂಗಳೂರು: ಹಿಂದೂ-ಮುಸ್ಲಿಮರ ಬಾಂಧವ್ಯಕ್ಕೆ ಅಷ್ಫಾಖ್‌ ಉಲ್ಲಾ ಖಾನ್‌ ಹಾಗೂ ಪಂಡಿತ್‌ ರಾಮ್‌ ಪ್ರಸಾದ್‌ ಬಿಸ್ಮಿಲ್‌ ಉತ್ತಮ ಉದಾಹರಣೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಾದ ಅಷ್ಫಾಖ್‌ ಉಲ್ಲಾ ಖಾನ್‌ ಹಾಗೂ ಪಂಡಿತ್‌ ರಾಮ್‌ ಪ್ರಸಾದ್‌ ಬಿಸ್ಮಿಲ್‌ ಅವರ ಸ್ಮರಣಾರ್ಥ ಖ್ವಾಮಿ ಏಕ್ತಾ ಸಮಿತಿ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ  ಏರ್ಪಡಿಸಿದ್ದ ಕೋಮು ಸೌಹಾರ್ದ ದಿನಾಚರಣೆಯಲ್ಲಿ ಮಾತನಾಡಿದ ಅವರು ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಬಳಿಕ ದೇಶದಲ್ಲಿ ಅಶಾಂತಿಯ ವಾತಾವರಣ ಹೆಚ್ಚಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಜಮ್ಮು ಕಾಶ್ಮೀರದ ನರ್ಗೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಡಿ ರಕ್ಷಣೆಗಾಗಿ ಪ್ರಾಣವನ್ನು ಅರ್ಪಿಸಿದ ಯೋಧ ಮೇಜರ್‌ ಅಕ್ಷಯ್‌ ಗಿರೀಶ್‌ ಅವರ ಕುಟುಂಬಕ್ಕೆ ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮದಿಂದ ಸಿಎಂ ಸಿದ್ದರಾಮಯ್ಯ 7 ಲಕ್ಷ ರೂ ಚೆಕ್ ವಿತರಿಸಿದರು. ಈ ವೇಳೆ ಗಿರೀಶ್ ಪೋಷಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com