

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧಕ್ಕೆ ಬೆಂಬಲ ಸೂಚಿಸಿ ಬೀದರ್ ನ ಸೀರೆ ವ್ಯಾಪಾರಿಯೊಬ್ಬರು 100 ರು ಬೆಲೆಯ ಸೀರೆ ಒಂದು ರೂಪಾಯಿಗೆ ಹಾಗೂ 200 ರು ಬೆಲೆಯ ಸೀರೆ 2 ರುಗೆ ಮಾರಾಟ ಮಾಡುತ್ತಿದ್ದಾರೆ.
ಬೀದರ್ ನ ಸೃಷ್ಟಿ- ದೃಷ್ಟಿ ಸ್ಯಾರಿ ಸೆಂಟರ್ ಮಾಲೀಕ ಚಂದ್ರಶೇಖರ್ ಪಸರಗೆ ಬಕ್ರೀದ್ ಹಾಗೂ ಕ್ರಿಸ್ ಮಸ್ ಗಾಗಿ ಸೂರತ್ ನಿಂದ ಸುಮಾರು 1 ಲಕ್ಷ ರು ಮೌಲ್ಯದ ಸೀರೆ ಖರೀದಿಸಿದ್ದರು. ಆದರೆ ನೋಟು ನಿಷೇಧದಿಂದಾಗಿ ಹಣವಿಲ್ಲದೇ ಸೀರೆ ಖರೀದಿಸಲು ಗ್ರಾಹಕರು ಆಗಮಿಸಿರಲಿಲ್ಲ. ಹೀಗಾಗಿ ಜನ ಕ್ರಿಸ್ ಮಸ್ ಅನ್ನು ಸಂಭ್ರಮದಿಂದ ಆಚರಿಸಲು 100 ರು ಹಾಗೂ 200 ರು ಮೌಲ್ಯದ ಸೀರೆಯನ್ನು ಒಂದು ಹಾಗೂ ಎರಡು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ನರೇಂದ್ರ ಮೋದಿ ಅವರ ನೋಟು ನಿಷೇಧ ಕ್ರಮಕ್ಕೆ ಬೆಂಬಲ ಸೂಚಿಸಲು ಈ ರೀತಿ ಮಾಡುವಂತೆ ತಮ್ಮ ಮಕ್ಕಳಾದ ದೃಷ್ಟಿ ಮತ್ತು ಸೃಷ್ಠಿ ನನಗೆ ಈ ಐಡಿಯಾ ಕೊಟ್ಟರು ಎಂದು ಅವರು ಹೇಳಿದ್ದಾರೆ.
ಸೀರೆ ಮಾರಾಟ ಮಾಡಿದ ಹಣವನ್ನು ನಾವು ಬಳಸಿಕೊಳ್ಳುವುದಿಲ್ಲ, ಅದನ್ನು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕುತ್ತೇವೆ ಎಂದು ಚಂದ್ರಶೇಖರ್ ಪಸರಗೆ ಪುತ್ರಿ ಸೃಷ್ಠಿ ತಿಳಿಸಿದ್ದಾರೆ,
1 ರುಪಾಯಿಗೆ ಒಂದು ಒಳ್ಳೆಯ ಚಾಕೋಲೇಟ್ ಕೂಡ ಸಿಗುವುದಿಲ್ಲ, ಅದರೇ ಅದೇ ಒಂದು ರೂಪಾಯಿಗೆ ಸೀರೆ ಸಿಗುತ್ತಿದೆ ಎಂದು ಸಂಗೀತಾ ಎಂಬ ಗ್ರಾಹಕಿ ಸಂತೋಷ ವ್ಯಕ್ತ ಪಡಿಸಿದ್ದಾರೆ.
ಡಿಸೆಂಬರ್ 16 ರಿಂದ ಈ ಸ್ಕೀಮ್ ಜಾರಿಯಲ್ಲಿದ್ದು, ಈ ತಿಂಗಳ ಅಂತ್ಯದವರೆಗೂ ಸೀರೆ ಕೊಳ್ಳಬಹುದಾಗಿದೆ. ಪಕ್ಕದ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಿಂದಲೂ ಸೀರೆ ಖರೀದಿಸಲು ಗ್ರಾಹಕರು ಬರುತ್ತಿದ್ದಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ.