

ಮೈಸೂರು: ಬಂಜೆತನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆ ವೇಳೆ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮಹಾದೇವಪುರದ ಪುಷ್ಟ ಮೃತ ಮಹಿಳೆ. ಪುಷ್ಪಾ ಕಳೆದ ಎರಡು ವರ್ಷಗಳಿಂದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪುಷ್ಪಾ ಅವರಿಗೆ ತಪ್ಪು ಚಿಕಿತ್ಸೆ ನೀಡಲಾಗಿದೆ, ಹೀಗಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆಯ ವಿರುದ್ದ ಮೃತ ಮಹಿಳೆ ಪೋಷಕರು ಮಂಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ಮೇಲೆ ವೈದ್ಯರು ಇಂಜೆಕ್ಷನ್ ನೀಡಿದ ನಂತರ ಪುಷ್ಪಾ ಪ್ರಜ್ಞಾ ಹೀನಾರಾಗಿದ್ದರು. ಅವರನ್ನು ಶಸ್ತ್ರ ಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ಲ್ಯಾಪ್ರೋಸ್ಕೋಪಿಕ್ ಸರ್ಜರಿಗಾಗಿ ಮಾಡಲಾಯಿತು, ಕೆಲ ಸಮಯದ ನಂತರ ಆಕೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಪುಷ್ಪಾ ಸಂಬಂಧಿಕರು ಆರೋಪಿಸಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಮೈಸೂರಿನ ಎಸ್ ಬಿಐ ಮ್ಯಾನೇಜರ್ ಶ್ರೀನಿವಾಸ್ ಜೊತೆ ವಿವಾಹವಾಗಿತ್ತು. ಪೊಲೀಸರು ಅಸ್ವಾಭಾವಿಕ ಸಾವಿನ ಕೇಸ್ ದಾಖಲಿಸಿದ್ದಾರೆ.