ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಉದ್ಯಾನವನದಲ್ಲಿ 6 ವರ್ಷದ ಬಾಲಕನ ಮೇಲೆ ಪಿಲ್ಲರ್ ಮೇಲಿದ್ದ ಕಲ್ಲು ಬಿದ್ದ ಪರಿಣಾಮ ಬಾಲಕ ದಾರುಣ ಸಾವನ್ನಪ್ಪಿದ್ದಾನೆ.
ಶ್ರೀರಾಂಪುರ ನಿವಾಸಿ ಕುಮಾರ್ ಮತ್ತು ರೇವತಿ ದಂಪತಿ ತಮ್ಮ ಪುತ್ರ 6 ವರ್ಷದ ವಿಕ್ರಮ್ ಜತೆ ಲಾಲ್‌ಬಾಗ್‌ನಲ್ಲಿ ಉದ್ಯಾನವನಕ್ಕೆ ಬಂದಿದ್ದರು. ಬಾಲಕನನ್ನು ಪಿಲ್ಲರ್ ಪಕ್ಕ ನಿಲ್ಲಿಸಿ ಫೋಟೋ ತೆಗೆಯುವ ವೇಳೆ ಪಿಲ್ಲರ್ ಕಲ್ಲು ಬಾಲಕನ ಮೇಲೆ ಬಿದ್ದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇಂದು ಮಧ್ಯಾಹ್ನ 2.45 ಸುಮಾರಿಗೆ ಈ ದುರ್ಘಟನೆ ಸಂಭವಿದ್ದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.