ತಿಪ್ಪೆಗೆ ಸೆಂಟ್‌ ಹೊಡೆದಂತೆ ಸ್ವಚ್ಛ ಭಾರತ ಅಭಿಯಾನ: ಜ್ಞಾನ ಪ್ರಕಾಶ ಸ್ವಾಮೀಜಿ ವ್ಯಂಗ್ಯ

ತಿಪ್ಪೆ ಮೇಲೆ ಹೊಡೆದಂತೆ ಸ್ವಚ್ಛ ಭಾರತ ಅಭಿಯಾನ, ಇದರಿಂದ ದೇಶ ಸ್ವಚ್ಛವಾಗದು. ಜಾತಿ, ಮತೀಯ ಭಾವನೆಯ ಕಸವನ್ನು ತೆಗೆದರೆ ಮಾತ್ರದೇಶ ಸ್ವಚ್ಛವಾಗುತ್ತದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಿಪ್ಪೆ ಮೇಲೆ ಹೊಡೆದಂತೆ ಸ್ವಚ್ಛ ಭಾರತ ಅಭಿಯಾನ,  ಇದರಿಂದ ದೇಶ ಸ್ವಚ್ಛವಾಗದು. ಜಾತಿ, ಮತೀಯ ಭಾವನೆಯ ಕಸವನ್ನು ತೆಗೆದರೆ ಮಾತ್ರದೇಶ ಸ್ವಚ್ಛವಾಗುತ್ತದೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ವ್ಯಂಗ್ಯವಾಡಿದ್ದಾರೆ.

ದಲಿತ ಸಂಘರ್ಷ ಸಮಿತಿ (ಸಮತಾವಾದ) ನಗರದಲ್ಲಿ ಆಯೋಜಿಸಿದ್ದ ಜ್ಯೋತಿಬಾ ಫುಲೆ ಅವರ 189ನೇ ಜಯಂತಿ ಅಂಗವಾಗಿ ‘ಜ್ಞಾನ ಪ್ರಸಾರ ಏಕತಾ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಇಡೀ ದೇಶ ಡ್ರಾಮಾ ಕಂಪೆನಿ ಆಗುತ್ತಿದೆ. ಕೃಪಾಪೋಷಿತ ನಾಟಕ ಮಂಡಳಿಗಳು ಎಲ್ಲೆಡೆ ತಲೆ ಎತ್ತುತ್ತಿವೆ. ಇವು ಪ್ರದರ್ಶಿಸುವ ನಾಟಕಗಳು ದೇಶವನ್ನು ಹಾಳು ಮಾಡುತ್ತಿವೆ ಎಂದು ಟೀಕಿಸಿದರು.

ದೇಶಪ್ರೇಮ, ರಾಷ್ಟ್ರೀಯತೆ ಎಂದು ಭಾಷಣ ಮಾಡುತ್ತಿದ್ದಾರೆ. ಆದರೆ ಇವರು ಯಾರೂ ದೇಶಕ್ಕಾಗಿ ಪ್ರಾಣ ಅರ್ಪಿಸಿಲ್ಲ.  ದೇಶದ ಗಡಿ ಕಾದಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಶೂದ್ರರು ಎಂದು ಹೇಳಿದರು.

ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು, ಭಾರತೀಯ ನಾರಿಯರು ರಾಜಕಾರಣ ಮಾಡಬಾರದು. ಅವರು ಗಂಡ, ಮಕ್ಕಳ ಸೇವೆ ಮಾಡಿಕೊಂಡು ಇರಬೇಕು ಎಂದು ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್‌, ಸ್ಮೃತಿ ಇರಾನಿ ಅವರು ರಾಜೀನಾಮೆ ಸಲ್ಲಿಸಬೇಕಲ್ಲವೇ? ಎಂದು ಜ್ಞಾನ ಪ್ರಕಾಶ ಅವರು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com