ಇ-ಸಿಗರೇಟ್ ನಿಷೇಧದದ ನಿರ್ಧಾರ ವಾಪಸ್ ಪಡೆಯಲಿದೆಯೇ ರಾಜ್ಯ ಸರ್ಕಾರ?

ಇ-ಸಿಗರೇಟ್ ನ್ನು ನಿಷೇಧ ಮಾಡಿದ್ದ ರಾಜ್ಯ ಸರ್ಕಾರ ಕೇವಲ 15 ದಿನಗಳಲ್ಲಿ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಇದೆ.
ಇ-ಸಿಗರೇಟ್
ಇ-ಸಿಗರೇಟ್

ಬೆಂಗಳೂರು: ಇ-ಸಿಗರೇಟ್ ನ್ನು ನಿಷೇಧ ಮಾಡಿದ್ದ ರಾಜ್ಯ ಸರ್ಕಾರ ಕೇವಲ 15 ದಿನಗಳಲ್ಲಿ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಇದೆ.

ತಂಬಾಕು ಬೆಳೆಗಾರರು ಜೂ.22 ರಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸರ್ಕಾರದ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದ್ದು ಇ-ಸಿಗರೇಟ್ ನ್ನು ನಿಷೇಧ ಮಾಡಿರುವ ಬಗ್ಗೆ ಸರ್ಕಾರ ಆರೋಗ್ಯ ಇಲಾಖೆಯಿಂದ ಮತ್ತೊಮ್ಮೆ ಸ್ಪಷ್ಟಿಕರಣ ಕೇಳಿದೆ.

ಜೂ.15 ರಂದು ಸರ್ಕಾರ ಹೊರಡಿಸಿದ್ದ ಆದೇಶದ ಪ್ರಕಾರ ನಿಕೋಟಿನ್ ಮೊದಲಾದ ರಾಸಾಯನಿಕ ವಸ್ತುಗಳನ್ನು ಒಳಗೊಂಡಿರುವ ದ್ರವದ ಕಾರ್ಟಿಜ್ ಅನ್ನು ಹೊಂದಿರುವ ಇ-ಸಿಗರೇಟ್ ನ್ನು ಮಾರಾಟ(ಆನ್ ಲೈನ್ ಸೇರಿದಂತೆ) ಮಾಡುವುದು, ರಫ್ತು ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ ಈಗ ಸರ್ಕಾರ ಉಲ್ಟಾ ಹೊಡೆದಿದ್ದು ನಿಷೇಧಕ್ಕೆ ಮತ್ತೊಮ್ಮೆ ಕಾರಣವನ್ನು ವಿವರಿಸುವಂತೆ ಸರ್ಕಾರ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.

" ಸರ್ಕಾರ ಇ-ಸಿಗರೇಟ್ ನ್ನು ನಿಷೇಧಿಸುವ ಆದೇಶ ಹೊರಡಿಸಿದ 15 ದಿನಗಳಲ್ಲಿ, ನಿಷೇಧಕ್ಕೆ ಕಾರಣವನ್ನು ಮತ್ತೊಮ್ಮೆ ವಿವರಿಸುವಂತೆ ಸೂಚನೆ ನೀಡಿರುವುದು ಅಚ್ಚರಿ ಮೂಡಿಸಿದೆ. ಇ-ಸಿಗರೇಟ್ ಗಳಲ್ಲೂ ನಿಕೋಟಿನ್ ಬಳಕೆ ಮಾಡಲಾಗುತ್ತಿದೆ. ಆದರೂ ಸರ್ಕಾರ ನಿಷೇಧದ ಕುರಿತು ಕಾರಣ ಕೇಳಿರುವುದು ಅಚ್ಚರಿ ಮೂಡಿಸಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಜೂ.15 ರಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಇ-ಸಿಗರೇಟ್ ಮಾರಾಟ, ವಿತರಣೆ ಮತ್ತು ಉತ್ಪಾದನೆಯನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಅವರು ಅಧಿಕೃತವಾಗಿ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com