ಬೇಳೆ ಬವಣೆಗೆ ಸರ್ಕಾರ ಪರಿಹಾರ: ನಿಗದಿತ ಬೆಲೆಯಲ್ಲಿ ಮಾರಾಟಕ್ಕೆ ಎಪಿಎಂಸಿಯಲ್ಲಿ ವ್ಯವಸ್ಥೆ

ತೊಗರಿ ಬೇಳೆ ಬೆಲೆ ಗಗನಕ್ಕೇರಿರುವುದರಿಂದ ತತ್ತರಿಸಿರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಎಪಿಎಂಸಿ ಮೂಲಕ ನಿಗದಿತ...
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್

ಬೆಂಗಳೂರು: ತೊಗರಿ ಬೇಳೆ ಬೆಲೆ ಗಗನಕ್ಕೇರಿರುವುದರಿಂದ ತತ್ತರಿಸಿರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಎಪಿಎಂಸಿ ಮೂಲಕ ನಿಗದಿತ ಬೆಲೆಯಲ್ಲೆ ತೊಗರಿ ಬೇಳೆ ಮಾರಾಟ ವ್ಯವಸ್ಥೆ ಕಲ್ಪಿಸುವುದಾಗಿ ಶನಿವಾರ ಹೇಳಿದೆ.

ನಿನ್ನೆಯಷ್ಟೇ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಅವರು, ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಮಹಾಒಕ್ಕೂಟ ಮತ್ತು ಸಗಟು ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳ ಜತೆಗೆ ಚರ್ಚೆ ನಡೆಸಿದ್ದರು. ನಂತರ ಮಾತನಾಡಿರುವ ಅವರು, ರಾಜ್ಯದ 144 ಎಪಿಎಂಸಿಗಳಲ್ಲಿ ಗ್ರೇಡ್ - 1 ಬೇಳೆ ಪ್ರತಿ ಕೆಜಿಗೆ ರು. 145 ಮತ್ತು ಗ್ರೇಡ್ -2 ಬೇಳೆ ಪ್ರತಿ ಕೆಜಿಗೆ ರು. 130 ಮಾರಲು ಒಪ್ಪಿಗೆ ಪಡೆಯಲಾಗಿದೆ. ಇದರಂತೆ ನಿಗದಿತ ಬೆಲೆಯಲ್ಲಿ ಮುಂದಿನ ಮೂರು ತಿಂಗಳವರೆಗೆ ಎಪಿಎಂಸಿಗಳಲ್ಲಿ ತೊಗರಿ ಬೇಳಿ ಮಾರಾಟ ಮಾಡಲಾಗುತ್ತದೆ. ಜುಲೈ 8 ರಿಂದ ಎಪಿಎಂಸಿಯಲ್ಲಿ ಅಧಿಕೃತವಾಗಿ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಎಲ್ಲಾ ಎಪಿಎಂಸಿಗಳಲ್ಲಿ ಕನಿಷ್ಠ 2 ಕೆಜಿಯಿಂದ ಎಷ್ಟು ಬೇಕಾದರೂ ಬೇಳೆ ಖರೀದಿಸಬಹುದು. ಚಿಲ್ಲರೆ ವ್ಯಾಪಾರಸ್ಥರು ಪ್ರತಿ ಕೆಜಿಯನ್ನು ರು. 15 ರಿಂದ ರು. 18 ರವರೆಗೆ ಹೆಚ್ಚುವರಿ ಬೆಲೆ ಮಾತ್ರ ಮಾರಾಟ ಮಾಡಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸೂಚನೆ ನೀಡಿದ್ದಾರೆ.

ತೊಗರಿ ಬೆಲೆ ಏರಿಕೆಯನ್ನೇ ದಾಳವನ್ನಾಗಿ ಮಾಡಿಕೊಂಡು ಗ್ರಾಹಕರಿಗೆ ವಂಚಿಸುತ್ತಿದ್ದ ಮೋರ್ ಮಾಲ್ ವಿರುದ್ಧ ಸರ್ಕಾರ ನೋಡಿಸ್ ಜಾರಿ ಮಾಡಲಿದೆ ಪ್ರತಿ ಕೆಜಿ ಬೇಳೆ ಮುಖಬೆಲೆ (ಎಂಆಱ್) ರು. 315 ಎಂದು ನಮೂದಿಸಿ, ರಂಜಾನ್ ಪ್ರಯುಕ್ತ ರಿಯಾಯಿತಿ ದರದ ಹೆಸರಿನಲ್ಲಿ ರು. 190ಕ್ಕೆ ಮಾರಾಟ ಮಾಡಲಾಗುತ್ತಿದೆ. ಆಧರೆ, ಪ್ರತಿ ಕೆಜೆ ಬೇಳೆ ಬೆಲೆ ರು. 130 ರಿಂದ ರು. 145 ಇದೆ. ಹೀಗಾಗಿ ಮೋರ್ ಮಾಲ್ ಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ತಪಾಸಣೆ ನಡೆಸಿ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನಿತರೆ ಮಾಲ್ ಗಳ ಮೇಲೂ ಕಣ್ಗಾವಲಿರಿಸಲಾಗಿದೆ ಎಂದು ಖಾದರ್ ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com