ನಗರದಲ್ಲಿ ಡೆಂಗ್ಯು ಪ್ರಕರಣ: ಸರ್ಕಾರಿ ಆಸ್ಪತ್ರೆ ಮತ್ತು ಬಿಬಿಎಂಪಿ ದಾಖಲೆಗಳ ಸಂಖ್ಯೆಯಲ್ಲಿ ವ್ಯತ್ಯಾಸ

ನಗರದಲ್ಲಿ ಹಬ್ಬಿರುವ ಡೆಂಗ್ಯು ಜ್ವರದ ಬಗ್ಗೆ ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ. ಪಾಲಿಕೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದಲ್ಲಿ ಹಬ್ಬಿರುವ ಡೆಂಗ್ಯು ಜ್ವರದ ಬಗ್ಗೆ ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ. ಪಾಲಿಕೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶ ಪ್ರಕಾರ, ಜೂನ್ 20ರ ವೇಳೆಗೆ 20 ಜನರಲ್ಲಿ ಡೆಂಗ್ಯು ಜ್ವರ ಕಾಣಿಸಿಕೊಂಡಿದೆ ಎಂದಿದೆ. ಆದರೆ ಸಿಟಿ ಎಕ್ಸ್ ಪ್ರೆಸ್ ನಡೆಸಿದ ಅಧ್ಯಯನದಲ್ಲಿ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯು ಜ್ವರದಿಂದ ಬಳಲುತ್ತಿರುವವರ ಸಂಖ್ಯೆ 72 ಆಗಿದೆ.
ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯ ಡಾ.ಸುರೇಶ್ ಹೇಳುವ ಪ್ರಕಾರ, ಈ ವರ್ಷ 15 ಡೆಂಗ್ಯು ಜ್ವರ ಪ್ರಕರಣಗಳು ಅಲ್ಲಿಗೆ ಬಂದಿವೆಯಂತೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅವರು. ಕಳೆದ ತಿಂಗಳೊಂದರಲ್ಲೇ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ 57 ಡೆಂಗ್ಯು ಜ್ವರ ಪ್ರಕರಣಗಳು ವರದಿಯಾಗಿವೆ.
ನಗರದಲ್ಲಿ ಹೊಂಡ, ಗುಂಡಿ ರಸ್ತೆಗಳು ಕೂಡ ಜ್ವರ ಹಬ್ಬಲು ಒಂದು ಕಾರಣ ಎನ್ನುತ್ತಾರೆ ಕೆಸಿ ಜನರಲ್ ಆಸ್ಪತ್ರೆಯ ಡಾ. ರವಿ ಕುಮಾರ್. ಗುಂಡಿಗಳಲ್ಲಿ ನೀರು ನಿಂತಿಕೊಳ್ಳುತ್ತವೆ. ಅಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯು ಜ್ವರಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಅವರು.
ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಜಂಟಿ ಆಯುಕ್ತ ಸರ್ಫರಾಜ್ ಖಾನ್, ಸೊಳ್ಳೆ ಉತ್ಪತ್ತಿಗೆ ರಸ್ತೆಗಳು ಕಾರಣವಾಗುವುದಿಲ್ಲ. ಹೊಂಡ, ಗುಂಡಿಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲದೆ ಮಳೆ ಬಂದು ನೀರು ನಿಂತಾಗ ಅದನ್ನು ಒಣಗಿಸುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದೇವೆ ಎನ್ನುತ್ತಾರೆ.
ಆಸ್ಪತ್ರೆಗಳಲ್ಲಿ ಸಿಕ್ಕಿರುವ ಡೆಂಗ್ಯು ಪ್ರಕರಣಗಳ ಸಂಖ್ಯೆಗೂ ಬಿಬಿಎಂಪಿ ಇಲಾಖೆಯ ವೆಬ್ ಸೈಟ್ ನಲ್ಲಿರುವ ಮಾಹಿತಿಗೂ ಭಾರೀ ವ್ಯತ್ಯಾಸ ಯಾಕಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಲೋಕೇಶ್ ಅವರನ್ನು ಕೇಳಿದಾಗ,ನಮಗೆ ಬಂದಿರುವ ಮಾಹಿತಿಯನ್ನು ಕಾಲಕಾಲಕ್ಕೆ ಅಪ್ ಡೇಟ್ ಮಾಡುತ್ತಿದ್ದೇವೆ. ಕೆಲವೊಮ್ಮೆ ಹೊರ ಭಾಗಗಳ ರೋಗಿಗಳು ಬೆಂಗಳೂರಿಗೆ ಬಂದು ಪರೀಕ್ಷೆ ಮಾಡಿಸಿಕೊಂಡಾಗ ಅವರಲ್ಲಿ ಡೆಂಗ್ಯು ಜ್ವರ ಕಾಣಿಸಿಕೊಳ್ಳುತ್ತದೆ. ಆದರೆ ಅವರು ಹೊರಭಾಗದವರಾಗಿರುವುದರಿಂದ ಅವರನ್ನು ಬಿಬಿಎಂಪಿ ವೆಬ್ ಸೈಟ್ ನಲ್ಲಿ ಸೇರಿಸಲಾಗುವುದಿಲ್ಲ. ಅದು ಆಸ್ಪತ್ರೆಯ ಪ್ರಯೋಗಾಲಯದ ದಾಖಲೆಗಳಲ್ಲಿರಬಹುದು. ಹಾಗಾಗಿ ಆಸ್ಪತ್ರೆಯ ಮತ್ತು ಬಿಬಿಎಂಪಿಯ ದಾಖಲೆಗಳಲ್ಲಿ ವ್ಯತ್ಯಾಸ ಕಾಣುತ್ತಿರಬಹುದು ಎನ್ನುತ್ತಾರೆ.
ಇನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿಯೂ ಡೆಂಗ್ಯು ಜ್ವರದ ಪ್ರಕರಣಗಳು ಅನೇಕ ಇವೆ. ಫೋರ್ಟಿಸ್ ಆಸ್ಪತ್ರೆಯ ಆಂತರಿಕ ವೈದ್ಯಕೀಯ ಸಲಹೆಗಾರರಾದ ಡಾ.ಸುಧಾ ಮೆನನ್ ಹೇಳುವ ಪ್ರಕಾರ, ಕಳೆದ ಎರಡು ತಿಂಗಳಲ್ಲಿ 120 ಡೆಂಗ್ಯು ಪ್ರಕರಣಗಳು ವರದಿಯಾಗಿವೆಯಂತೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com