ಬೆಂಗಳೂರು: ಕೆಲಾಗ್ಸ್ ಕಾರ್ನ್ ಫ್ಲೇಕ್ಸ್ ಪಾಕೆಟ್ ನಲ್ಲಿ ಹುಳು ಪತ್ತೆ

ಮಹಿಳೆಯೊಬ್ಬರು ಖರೀದಿಸಿದ್ದ ಕೆಲಾಗ್ಸ್ ಕಾರ್ನ್ ಫ್ಲೆಕ್ಸ್ ಪಾಕೆಟ್ ನಲ್ಲಿ ಹುಳು ಪತ್ತೆಯಾಗಿದೆ. ಫೋಟೋ ತೆಗೆದು ಮಹಿಳೆ ಫೇಸ್ ಬುಕ್ ಪೇಜ್ ನಲ್ಲಿ ಹಾಕಿದ್ದಾರೆ. ದೊಡ್ಡ ಕಂಪನಿಗಳು ..
ಕೆಲಾಗ್ಸ್ ಕಾರ್ನ್ ಫ್ಲೇಕ್ಸ್
ಕೆಲಾಗ್ಸ್ ಕಾರ್ನ್ ಫ್ಲೇಕ್ಸ್

ಬೆಂಗಳೂರು: ಮಹಿಳೆಯೊಬ್ಬರು ಖರೀದಿಸಿದ್ದ ಕೆಲಾಗ್ಸ್ ಕಾರ್ನ್ ಫ್ಲೆಕ್ಸ್ ಪಾಕೆಟ್ ನಲ್ಲಿ ಹುಳು ಪತ್ತೆಯಾಗಿದೆ.

ಆಕಾಂಕ್ಷಾ ಮಲ್ಹೋತ್ರಾ ಎಂಬುವರು ಸೋಮವಾರ ಬೆಳಗ್ಗೆ ಕಾರ್ನ್ ಫ್ಲೇಕ್ಸ್ ಪಾಕೆಟ್ ತೆರೆದಿದ್ದಾರೆ. ಈ ವೇಳೆ ಹುಳು ಪತ್ತೆಯಾಗಿದ್ದು,  ಫೋಟೋ ತೆಗೆದು ಮಹಿಳೆ ಫೇಸ್ ಬುಕ್ ಪೇಜ್ ನಲ್ಲಿ ಹಾಕಿದ್ದಾರೆ. ದೊಡ್ಡ ಕಂಪನಿಗಳು ಉತ್ತಮ ಗುಣ ಮಟ್ಟದ ಪದಾರ್ಥ ನೀಡುತ್ತವೆ ಎಂದು ಭಾವಿಸಿದ್ದೆವು ಎಂದು ಹೇಳಿರುವ ಅವರು ಇನ್ನು ಮುಂದೆ ಕಂಪನಿಯ ಎಲ್ಲಾ ಉತ್ಪನ್ನಗಳ ಗುಣ ಮಟ್ಟದ ಬಗ್ಗೆ ಅನುಮಾನ ಮೂಡುತ್ತದೆ ಎಂದು ಹೇಳಿದ್ದಾರೆ.

ಮೇ ತಿಂಗಳಲ್ಲಿ ವೆಬ್ ಫೋರ್ಟಲ್ ಝೋಫ್ನೋ ದಲ್ಲಿ ಆಕಾಂಕ್ಷಾ ಮಲ್ಹೋತ್ರ ಪಾಕೆಟ್ ಖರೀದಿಸಿದ್ದರು. ಆಗಸ್ಟ್ ನಲ್ಲಿ ಉತ್ಪನ್ನದ ಅವಧಿ (ಎಕ್ಸ್ ಪೈರ್ ಡೇಟ್) ಮುಗಿಯುವುದಾಗಿ ಪ್ರಿಂಟ್ ಮಾಡಲಾಗಿತ್ತು. ಸೋಮವಾರ ಅದನ್ನು ಬಳಸಲು ತೆರದಿದ್ದಾರೆ. ಅದರಲ್ಲಿ ಹುಳುಗಳು ಹರಿದಾಡುತ್ತಿರುವುದು ಕಾಣಿಸಿದೆ.

ಈ ಸಂಬಂಧ ಕೆಲಾಗ್ಸ್ ಕಂಪನಿಗೆ ದೂರು ನೀಡಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿರುವ ಕಂಪನಿ ಅನಾನುಕೂಲಕ್ಕೆ ಕ್ಷಮೆಯಾಚಿಸಿ, ತಂಡವೊಂದನ್ನು ಕಳುಹಿಸಿ ದೂರು ದಾಖಲಿಸಿಕೊಳ್ಳುವುದಾಗಿ ತಿಳಿಸಿದೆ.

ಆದರೆ ಕೆಲಾಗ್ಸ್ ಕಾರ್ನ್ ಫ್ಲೇಕ್ಸ್ ನಲ್ಲಿ ಹುಳು ಪತ್ತೆಯಾಗಿರುವುದು ಹಲವು ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.

ದೊಡ್ಡ ಬ್ರಾಂಡ್ ನೇಮ್ ಇರುವ ಕೆಲಾಗ್ಸ್ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ತೆಗೆದುಕೊಳ್ಳುತ್ತದೆ. ಹೀಗಿದ್ದರೂ ಉತ್ತಮ ಗುಣಮಟ್ಟದ ಆಹಾರ ನೀಡದಿದ್ದರೇ ಹೇಗೆ, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಶ್ಮಿತಾ ಚಟರ್ಜಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಯಮಗಳ ಪ್ರಕಾರ ಯಾವುದೇ ಉತ್ಪನ್ನಗಳಲ್ಲಿ ದೋಷ ಕಂಡು ಬಂದರೆ, ಕನಿಷ್ಠ ಆರು ತಿಂಗಳ ಶಿಕ್ಷೆ ಮತ್ತು 1 ಲಕ್ಷ ರು. ದಂಡ ವಿಧಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com