ವಿಚ್ಛೇದನ ಪ್ರಕರಣ: ದೇಶದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ

ಇತ್ತೀಚಿನ ವರ್ಷಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣ ದೇಶದಾದ್ಯಂತ ಹೆಚ್ಚಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವುದನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣ ದೇಶದಾದ್ಯಂತ ಹೆಚ್ಚಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವುದನ್ನು ಓದಿದ್ದೇವೆ. ಇನ್ನೊಂದು ಆತಂಕಕಾರಿ ವಿಷಯವೆಂದರೆ ವಿಚ್ಛೇದನ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ 4ನೇ ಸ್ಥಾನದಲ್ಲಿದೆ. ಕೇರಳ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಕ್ರಮವಾಗಿ 1, 2 ಹಾಗೂ 3ನೇ ಸ್ಥಾನದಲ್ಲಿದೆ.
2014ರಲ್ಲಿ ರಾಜ್ಯದ ಕೌಟುಂಬಿಕ ಕೋರ್ಟ್ ಗಳು ಅತೀ ಹೆಚ್ಚು ವಿವಾಹ ವಿಚ್ಛೇದನ ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. 2014ರಲ್ಲಿ 16,690 ದಂಪತಿಗಳು ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ. 2015ರ ಆರಂಭದಲ್ಲಿ ಕೌಟುಂಬಿಕ ಕೋರ್ಟ್ ಗಳಲ್ಲಿ ಸುಮಾರು 23,285 ವಿಚ್ಛೇದನ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದಿರುವುದಾಗಿ ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.
ನಾನು ಒಂದು ದಿನಕ್ಕೆ 25 ವಿವಾಹ ವಿಚ್ಛೇದನ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತೇನೆ. ಆದರೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಒಂದು ಪ್ರಕರಣದ ವಿಚಾರಣೆಗೆ ನ್ಯಾಯಾಧೀಶರು ಆರು ನಿಮಿಷಕ್ಕಿಂತ ಹೆಚ್ಚು ಸಮಯವನ್ನು ಮೀಸಲಿರಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕೌಟುಂಬಿಕ ನ್ಯಾಯಾಲಯದ ವಕೀಲ ಬಿಎನ್ ನಾಗರಾಜ್.
ಬಹುತೇಕ ಪ್ರಕರಣಗಳು ಮದುವೆಯಾದ ಕೆಲವೇ ವರ್ಷಗಳಲ್ಲಿ ಹೊಂದಾಣಿಕೆ ಸಾಧ್ಯವಾಗದಿರುವುದು ವಿವಾಹ ವಿಚ್ಛೇದನಕ್ಕೆ ಪ್ರಮುಖ ಕಾರಣವಾಗುತ್ತಿದೆ. ಅದೇ ರೀತಿ 2ನೇ ವಿವಾಹವೂ ಕೂಡಾ ಮುರಿದು ಬೀಳುತ್ತಿರುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ನಪುಂಸಕತೆ, ವ್ಯಭಿಚಾರದಂತಹ ಕಾರಣಗಳೂ ಕೂಡಾ ವಿವಾಹ ವಿಚ್ಛೇದನಕ್ಕೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲ ಮಹಿಳೆಯರು ಹೆಚ್ಚು ಕಾಲ ಗಂಡಂದಿರ ಜೊತೆ ಅರ್ಥಹೀನ ಮತ್ತು ಅಸಮತೋಲನದ ಹೊಂದಾಣಿಕೆಗೆ ಸಿದ್ಧರಿಲ್ಲ ಎಂಬುದು ಕೂಡಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವಕೀಲೆ ರಿಷಿ ಕೆ ರುಯಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com