ಬೆಂಗಳೂರು: ಫೆಬ್ರವರಿ ತಿಂಗಳಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ-2016 ಸಭೆಗೆ ರಾಜ್ಯ ಸರ್ಕಾರ ರು. 40 ಕೋಟಿ ಹಣವನ್ನು ಖರ್ಚು ಮಾಡಿತ್ತು ಎಂಬ ಮಾಹಿತಿಯನ್ನು ಆರ್'ಟಿಐ ಬಹಿರಂಗಗೊಳಿಸಿದೆ.
ಫೆಬ್ರವರಿಯಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆ ಸಭೆಗೆ ಸರ್ಕಾರ ಖರ್ಚು ಮಾಡಿದ ಹಣದ ಮಾಹಿತಿ ನೀಡುವಂತೆ ಕೇಳಿ ಆರ್ ಟಿಐ ಬಳಿ ಶ್ರುತಿ. ಪಿ ಎಂಬುವವರು ಮಾಹಿತಿ ಕೇಳಿದ್ದರು. ಇದರಂತೆ ಆರ್ ಟಿಐ ಮಾಹಿತಿ ನೀಡಿದೆ,
ಜಾಗತಿಕ ಬಂಡವಾಳ ಹೂಡಿಕೆ ಸಭೆಗೆ ರಾಜ್ಯ ಸರ್ಕಾರ ಊಟದ ವ್ಯವಸ್ಧೆಗೆ ರು.2.31 ಕೋಟಿ ಸೇರಿ ರು.40 ಕೋಟಿ ಹಣವನ್ನು ಖರ್ಚು ಮಾಡಿದೆ. ಕೇವಲ ಮೂರು ದಿನದ ಸಭೆಗಾಗಿ ಸರ್ಕಾರ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ವ್ಯಯಿಸಿದ್ದು, ಇಷ್ಟೊಂದು ಹಣವನ್ನು ಇನ್ನಿತರೆ ಉದ್ದೇಶಗಳಿಗೆ ಬಳಸಬಹುದಿತ್ತು ಎಂದು ಶ್ರುತಿ ಅವರು ಹೇಳಿಕೊಂಡಿದ್ದಾರೆ.
ತೆರಿಗೆ ಕಟ್ಟುವ ಜನರಿಗೆ ಸರ್ಕಾರ ಉತ್ತರ ಹೇಳಬೇಕಿದೆ. ಇಷ್ಟೊಂದು ಖರ್ಚು ಮಾಡಿ ಇನ್ವೆಸ್ಟ್ ಕರ್ನಾಟಕ ಸಭೆಯನ್ನು ಏರ್ಪಡಿಸಿದ ಸರ್ಕಾರ ಎಷ್ಟು ವಿದೇಶ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಯಶಸ್ವಿಯಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಬೇಕು.
ಸಭೆಯಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ ನಿರ್ಮಾಣಕ್ಕೆ ರು. 18.47 ಕೋಟಿ, ಕಾರ್ಯಕ್ರಮ ನಿರ್ವಹಣೆಗೆ ರು.12.27 ಕೋಟಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಾಹೀರಾತುಗಳಿಗೆ ರು.1.12 ಕೋಟಿ, ರಾಷ್ಟ್ರೀಯ ರೋಡ್ ಶೋ ರು.90.07 ಲಕ್ಷ, ಅಂತರಾಷ್ಟ್ರೀಯ ರೋಡ್ ಶೋಗೆ ರು.93.26 ಲಕ್ಷ ಖರ್ಚು ಮಾಡಿದೆ. ಕೇವಲ ರೋಡ್ ಶೋಗಾಗಿಯೇ ಒಟ್ಟು ರು.2.26 ಕೋಟಿ ಹಣವನ್ನು ಖರ್ಚು ಮಾಡಿದೆ ಎಂದು ಹೇಳಿದ್ದಾರೆ.
ಆರ್ ಟಿಐ ನೀಡಿದ ಮಾಹಿತಿಗೆ ಪ್ರತಿಕ್ರಿಯೆ ನೀಡಲು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆಯವರು ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರು ಕರ್ನಾಟಕ ರಾಜ್ಯ ಕೈಗಾರಿಕೆ ಬಂಡವಾಳ ಮತ್ತು ಅಭಿವೃದ್ಧಿ ನಿಗಮ, ರಾಜ್ಯ ಸರ್ಕಾರ ಏರ್ಪಡಿಸಿದ್ದ ಜಾಗತೀಕ ಬಂಡವಾಳ ಸಭೆಗೆ ಹೋಲಿಕೆ ಮಾಡಿದರೆ, ಖರ್ಚು ಮಾಡಿರುವುದು ದೊಡ್ಡ ಮೊತ್ತವೇನಲ್ಲ ಎಂದು ಹೇಳಬಹುದು ಎಂದಿದೆ.
ವಿದೇಶಿಗರು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಆಕರ್ಷಿಸುವುದು ಅತ್ಯಂತ್ ಪ್ರಮುಖವಾದದ್ದು. ಸಭೆಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಐಪಿ ಮತ್ತು ವಿವಿಐಪಿಗಳು ಆಗಮಿಸಿದ್ದರು. ಈ ವೇಳೆ ಅವರಿಗೆ ಊಟೋಪಚಾರವನ್ನು ಉತ್ತಮವಾಗಿ ಮಾಡುವುದು ಅತ್ಯಂತ ಮುಖ್ಯವಾದದ್ದು. ಸಭೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಭಾಗವಸಿದ್ದರು ಎಂದು ಹೇಳಿದ್ದಾರೆ.
ಇನ್ನು ಇನ್ವೆಸ್ಟ್ ಕರ್ನಾಟಕ ವೆಬ್ ಸೈಟ್ ನೀಡಿರುವ ಮಾಹಿತಿ ಪ್ರಕಾರ ಸುಮಾರು 1,201 ಯೋಜನೆಗಳಿಗೆ ಹೀಗಾಗಲೇ ಅನುಮೋದನೆಗೊಂಡಿದ್ದು, ನಿಲುವಳಿ ಒಪ್ಪಂದಗಳು ರು.3,08,810 ಕೋಟಿಯಷ್ಟಿದೆ. ಇದರಂತೆ ರಾಜ್ಯದಾದ್ಯಂತ 6,70,931 ಉದ್ಯೋಗ ಸೃಷ್ಟಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಇನ್ವೆಸ್ಟ್ ಕರ್ನಾಟಕದಲ್ಲಿ ಎಷ್ಟು ಹಣ ಹೂಡಿಕೆಯಾಗಿದೆ ಎಂಬುದರ ನಿಖರ ಅಂಕಿಅಂಶಗಳನ್ನು ಪ್ರಕಟಿಸಲಾಗಿಲ್ಲ. ಆದರೆ, ಇನ್ವೆಸ್ಟ್ ಕರ್ನಾಟಕ ಹೊಸ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಸಹಾಯಕವಾಗಿದೆ ಎಂದು ಹೇಳಲಾಗಿದೆ.
Advertisement