ಒಪ್ಪಂದಕ್ಕಿಂತಲೂ ಹೆಚ್ಚು ಶುಲ್ಕ ಪಡೆಯುತ್ತಿರುವ ಇಂಜಿನಿಯರಿಂಗ್ ಕಾಲೇಜುಗಳು

ಸಾಕಷ್ಟು ಚರ್ಚೆಗಳು ಹಾಗೂ ವಿರೋಧಗಳ ಮಧ್ಯೆಯೂ ಶೇ.10 ರಷ್ಟು ಶುಲ್ಕವನ್ನು ಹೆಚ್ಚಿಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಇಂಜಿನಿಯರಿಂಗ್ ಕಾಲೇಜುಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಕಷ್ಟು ಚರ್ಚೆಗಳು ಹಾಗೂ ವಿರೋಧಗಳ ಮಧ್ಯೆಯೂ ಶೇ.10 ರಷ್ಟು ಶುಲ್ಕವನ್ನು ಹೆಚ್ಚಿಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಇಂಜಿನಿಯರಿಂಗ್ ಕಾಲೇಜುಗಳು ಇದೀಗ ಒಪ್ಪಂದಕ್ಕಿಂತಲೂ ಹೆಚ್ಚು ಶುಲ್ಕವನ್ನು ಪಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಹೆಚ್ಚುವರಿ ಶುಲ್ಕ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳ ಬಳಿ ಕಾಲೇಜುಗಳು ಹಣ ಕಿತ್ತುಕೊಳ್ಳುತ್ತಿದೆ ಎಂದು ಹೇಳಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಳಿ ಸಾಕಷ್ಟು ದೂರುಗಳು ದಾಖಲಾಗುತ್ತಿದ್ದು, ಸರ್ಕಾರದೊಂದಿಗೆ ಕಾಲೇಜುಗಳು ಎಷ್ಟು ಶುಲ್ಕ ಒಪ್ಪಂದ ಮಾಡಿಕೊಂಡಿದೆ ಎಂಬುದರ ಸ್ಪಷ್ಟನೆ ನೀಡುವಂತೆ ಅಧಿಕಾರಿಗಳ ಬಳಿ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ದೂರು ಕುರಿತಂತೆ ಕೆಇಎಸ್ ಮೂಲಗಳು ಖಚಿತಪಡಿಸಿದ್ದು, ಕಾಲೇಜುಗಳು ಹೆಚ್ಚುವರಿ ಶುಲ್ಕ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳ ಬಳಿ ಹೆಚ್ಚು ಶುಲ್ಕ ಪಾವತಿ ಮಾಡಿಕೊಳ್ಳುತ್ತಿರುವುದಾಗಿ ಸಾಕಷ್ಟು ದೂರುಗಳು ಬರುತ್ತಿವೆ. ಸಾಕಷ್ಟು ಪೋಷಕರು ಸಹಾಯವಾಣಿಗೆ ಕರೆ ಮಾಡಿ ದೂರು ಹೇಳುತ್ತಿದ್ದಾರೆ. ಇನ್ನು ಕೆಲವರು ಪತ್ರ ಬರೆಯುವ ಮುಖಾಂತರ ದೂರು ನೀಡುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ವಿದ್ಯಾರ್ಥಿಗಳ ದೂರುಗಳನ್ನು ನಿಭಾಯಿಸಲು ಇಲ್ಲಿ ಯಾವುದೇ ನಿಯೋಜಿತ ಪ್ರಾಧಿಕಾರವಿಲ್ಲ ಎಂದು ಹೇಳಿದೆ.

ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕಾಯ್ದೆ 2006ರ ಪ್ರಕಾರ, ಒಂದು ಸಮಿತಿ ಶುಲ್ಕ ನಿಗದಿ ಹಾಗೂ ಇನ್ನಿತರೆ ಪ್ರವೇಶ ಸಮಸ್ಯೆಗಳನ್ನು ಆಲಿಸಲು ರಚಿಸಬೇಕೆಂದು ಹೇಳಿದೆ. ಕಾಲೇಜುಗಳು ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದು ಅಥವಾ ನಿಯಮ ಉಲ್ಲಂಘಿಸುತ್ತಿರುವುದರ ಕುರಿತಂತೆ ವಿದ್ಯಾರ್ಥಿಗಳಾಗಲಿ ಅಥವಾ ಪೋಷಕರಾಗಲಿ ಸಮಿತಿಗೆ ದೂರು ನೀಡಬೇಕು. ಒಂದು ವೇಳೆ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ಬಂದರೂ ಪ್ರಾಧಿಕಾರ ಸಮಿತಿಗೆ ವರ್ಗಾಯಿಸಬೇಕೆಂದು ಹೇಳಿದೆ, ಆದರೆ, ಆಡಳಿತ ಮಂಡಳಿ ಈವರೆಗೂ ಯಾವುದೇ ಸಮತಿಯನ್ನು ನೇಮಿಸಿಲ್ಲ.

ದೂರುಗಳನ್ನು ವರ್ಗಾಯಿಸಲು ಸಮಿತಿ ಇಲ್ಲದಿದ್ದರಿಂದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗುವಂತೆ ನಿರ್ದೇಶನ ನೀಡಲಾಗುತ್ತಿದೆ ಎಂದು ಕೆಇಎ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಸಿಇಟಿ ಮೀಸಲಾತಿ ಅಡಿಯಲ್ಲಿ ಬರುವ ಸರ್ಕಾರಿ ಸೀಟುಗಳಿಗೆ ರು.49,500 ಶುಲ್ಕವನ್ನು ಸರ್ಕಾರ ನಿಗದಿಪಡಿಸಿದೆ.  ಇದೀಗ ಇಂಜಿನಿಯರಿಂಗ್ ಕಾಲೇಜುಗಳು ಶುಲ್ಕವನ್ನು ಬಿಟ್ಟು ಕಾಲೇಜುಗಳು ರು. 10 ರಿಂದ 30 ಸಾವಿರ ಶುಲ್ಕವನ್ನು ಹೆಚ್ಚುವರಿಯಾಗಿ ಪಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಕೆಲವು ಕಾಲೇಜುಗಳು ಹೆಚ್ಚುವರಿ ಶುಲ್ಕಗಳನ್ನು ತಮ್ಮ ವೆಬ್ ಸೈಟ್ ಗಳಲ್ಲಿಯೇ ಪ್ರಕಟಿಸಿಕೊಂಡಿವೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com