ದುಬಾರಿಯಾಗಲಿದೆ ವೈದ್ಯಕೀಯ ಶಿಕ್ಷಣ: ಐದು ಲಕ್ಷ ಗಡಿ ದಾಟುವ ಸಾಧ್ಯತೆ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಸೀಟು ಹಂಚಿಕೆ ವಿಚಾರದಲ್ಲಿ ಸರ್ಕಾರ ಹಾಗೂ ಖಾಸಗಿ ಕಾಲೇಜುಗಳ ಹಗ್ಗಜಗ್ಗಾಟದಿಂದ ಕಂಗಾಲಾಗಿರುವ ಜನತೆಗೆ ಇದೀಗ ಮತ್ತೊಂದು ಬಿಸಿ...
ದುಬಾರಿಯಾಗಲಿದೆ ವೈದ್ಯಕೀಯ ಶಿಕ್ಷಣ: ಐದು ಲಕ್ಷ ಗಡಿ ದಾಟುವ ಸಾಧ್ಯತೆ
ದುಬಾರಿಯಾಗಲಿದೆ ವೈದ್ಯಕೀಯ ಶಿಕ್ಷಣ: ಐದು ಲಕ್ಷ ಗಡಿ ದಾಟುವ ಸಾಧ್ಯತೆ

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಸೀಟು ಹಂಚಿಕೆ ವಿಚಾರದಲ್ಲಿ ಸರ್ಕಾರ ಹಾಗೂ ಖಾಸಗಿ ಕಾಲೇಜುಗಳ ಹಗ್ಗಜಗ್ಗಾಟದಿಂದ ಕಂಗಾಲಾಗಿರುವ ಜನತೆಗೆ ಇದೀಗ ಮತ್ತೊಂದು ಬಿಸಿ ತಟ್ಟಿದ್ದು, ಖಾಸಗಿ ಕಾಲೇಜುಗಳಲ್ಲಿನ ವೈದ್ಯಕೀಯ ಶಿಕ್ಷಣ ಮತ್ತಷ್ಟು ದುಬಾರಿಯಾಗಲಿದೆ.

ರಾಜ್ಯ ವೈದ್ಯಕೀಯ ಶಿಕ್ಷಣದ ಇಲಾಖೆಯ ಮೂಲಗಳು ತಿಳಿಸಿರುವ ಪ್ರಕಾರ ಖಾಸಗಿ ಕಾಲೇಜಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೀಟುಗಳ ಶುಲ್ಕಮುಂದಿನ ದಿನಗಳಲ್ಲಿ  5 ಲಕ್ಷ ದಾಟುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಹೈ ಕೋರ್ಟ್ ನ್ಯಾಯಾಧೀಶರ ನೇತೃತ್ವದ ಶುಲ್ಕ ನಿಗದಿ ಸಮಿತಿ ಈಗಾಗಲೇ ಸೀಟುಗಳ ಶುಲ್ಕದ ಕುರಿತಂತೆ ಸರ್ಕಾರಕ್ಕೆ ಈಗಾಗಲೇ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಕಾಲೇಜುಗಳು ನೀಡುವ ಸೌಲಭ್ಯಗಳ ಆಧಾರದ ಮೇಲೆ ಶುಲ್ಕ ನಿಗದಿಯಾಗಲಿದೆ ಎಂದು ಹೇಳಿದೆ. ಇನ್ನು ಉನ್ನತ ಮೂಲಗಳು ತಿಳಿಸಿರುವ ಪ್ರಕಾರ ವರದಿಯಲ್ಲಿ ಉನ್ನತ ವೈದ್ಯಕೀಯ ಕಾಲೇಜುಗಳ ಶುಲ್ಕ ರು.5 ಲಕ್ಷಕ್ಕೂ ಹೆಚ್ಚು ಹಣವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿವೆ

ಪ್ರಸ್ತುತ ಖಾಸಗಿ ಕಾಲೇಜುಗಳಲ್ಲಿ ವರ್ಷಕ್ಕೆ ರು.4.25ರಷ್ಟ ಶುಲ್ಕವನ್ನು ವಿದ್ಯಾರ್ಥಿಗಳು ಕಟ್ಟುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಸೀಟುಗಳಿಂದ ಬಂದ ವಿದ್ಯಾರ್ಥಿಗಳಿಗೆ ಶೇ.40 ರಷ್ಟು ರಿಯಾಯಿತಿ ಇರುತ್ತದೆ. ಇದರಂತೆ ಸರ್ಕಾರಿ ಸೀಟುಗಳ ಮೇಲೆ ಹೋದ ವಿದ್ಯಾರ್ಥಿಗಳು ರು.55 ಸಾವಿರ ಹಣವನ್ನು ಕಟ್ಟಬೇಕಾಗುತ್ತದೆ.

ಇದೀಗ ನೀಟ್ ಸುಗ್ರೀವಾಜ್ಞೆ ಜಾರಿಯಾದ ನಂತರ ಸರ್ಕಾರಿ ರಿಯಾಯಿತಿಗಳಿಗೆ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳು ನಿಗದಿ ಪಡಿಸಿದಷ್ಟು ಶುಲ್ಕವನ್ನು ಕಟ್ಟಬೇಕಾಗುತ್ತದೆ. ನೀಟ್ ರ್ಯಾಂಕ್ ಗಳ ಆಧಾರದ ಮೇಲೆ ಶೇ.85ರಷ್ಟು ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳು ಸೀಟು ಹಂಚಿಕೆ ಮಾಡಲಿದೆ. ಎನ್ ಆರ್ ಐ ಕೋಟಾದಿಂದ ಬರುವ ಶೇ.15 ವಿದ್ಯಾರ್ಥಿಗಳು ಮಾತ್ರ ಹೆಚ್ಚಿನ ಶುಲ್ಕ ಕಟ್ಟಬೇಕಾಗುತ್ತದೆ.

ಸೀಟು ಹಂಚಿಕೆ ವಿಚಾರ ಸಂಬಂಧ ಪ್ರಸ್ತುತ ರಾಜ್ಯ ವೈದ್ಯಕೀಯ ಶಿಕ್ಷಣ ಹಾಗೂ ಹೆಚ್ಚುವರಿ ಶಿಕ್ಷಣ ಸಚಿವರು ಖಾಸಗಿ ಕಾಲೇಜುಗಳಿಗೆ ಮನವರಿಕೆ ಮಾಡಿಕೊಡುವ ಕಾರ್ಯವನ್ನು ಮುಂದುವರಿಸಿದ್ದಾರೆ. ಮೂಲಗಳ ಪ್ರಕಾರ ಸೀಟು ಹಂಚಿಕೆ ವಿಚಾರದಲ್ಲಿ ಸರ್ಕಾರದ ಸೂಚನೆಗಳನ್ನು ಪಾಲಿಸಲು ಖಾಸಗಿ ಕಾಲೇಜುಗಳು ಒಪ್ಪಿಕೊಂಡಿದ್ದು, ಶುಲ್ಕ ವಿಚಾರದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಸರ್ಕಾರದ ಸೂಚನೆ ಕೇಳಲು ಸಿದ್ದವಿಲ್ಲ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಮಾತನಾಡಿದ್ದು, ಸರ್ಕಾರದೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳಲು ಖಾಸಗಿ ಕಾಲೇಜುಗಳು ಸಿದ್ಧವಿದೆ. ಆದರೆ, ಶೇ.85 ರಷ್ಟು ವಿದ್ಯಾರ್ಥಿಗಳಿಗೂ ರಿಯಾಯಿತಿ ಇಲ್ಲದೆಯೇ ಸಮಾನ ಶುಲ್ಕ ನಿಗದಿಪಡಿಸುವಂತೆ ಆಗ್ರಹಿಸುತ್ತಿವೆ. ಇಂತಹ ಕೆಲಸವನ್ನು ಯಾವ ಸರ್ಕಾರವೂ ಮಾಡುವುದಿಲ್ಲ. ಸಮಸ್ಯೆ ಬಗೆಹರಿಕೆಗೆ ಶುಲ್ಕ ನಿಗದಿ ಸಮತಿಯಿದ್ದು, ಸಮಿತಿಯ ವರದಿಯಂತೆ ಮುನ್ನಡೆಯಲಾಗುತ್ತದೆ ಎಂದು ಹೇಳಿದ್ದಾರೆ.

ಖಾಸಗಿ ಕಾಲೇಜುಗಳಿಗೆ ಮನವರಿಕೆ ಮಾಡುವ ಪ್ರಯತ್ನಗಳನ್ನು ಸರ್ಕಾರ ಮುಂದುವರೆಸುತ್ತಿದ್ದು, ಸಮಸ್ಯೆ ಬಗೆಹರಿಕೆಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಧ್ಯ ಪ್ರವೇಶ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com