ಸುಮಾರು 3 ಸಾವಿರ ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ಬೀಗ

ಹೊಸ ಅಧ್ಯಯನ ವರ್ಷ ಆರಂಭಾವಾಗುತ್ತಿದ್ದಂತೆ ಜನತೆ ಆಘಾತಕಾರಿ ವಿಚಾರವೊಂದನ್ನು ರಾಜ್ಯ ಸರ್ಕಾರ ನೀಡಿದ್ದು, ಮಕ್ಕಳ ದಾಖಲಾತಿ ಕೊರತೆಯಿಂದಾಗಿ...
ಬರೋಬ್ಬರಿ 3 ಸಾವಿರ ಶಾಲೆಗಳಿಗೆ ಬೀಗ ಹಾಕಲಿರುವ ಸರ್ಕಾರ
ಬರೋಬ್ಬರಿ 3 ಸಾವಿರ ಶಾಲೆಗಳಿಗೆ ಬೀಗ ಹಾಕಲಿರುವ ಸರ್ಕಾರ

ಬೆಂಗಳೂರು: ಹೊಸ ಅಧ್ಯಯನ ವರ್ಷ ಆರಂಭಾವಾಗುತ್ತಿದ್ದಂತೆ ಜನತೆ ಆಘಾತಕಾರಿ ವಿಚಾರವೊಂದನ್ನು ರಾಜ್ಯ ಸರ್ಕಾರ ನೀಡಿದ್ದು, ಮಕ್ಕಳ ದಾಖಲಾತಿ ಕೊರತೆಯಿಂದಾಗಿ 3000 ಶಾಲೆಗಳಿಗೆ ಬೀಗ ಹಾಕುವಂತೆ ಆದೇಶ ನೀಡಿದೆ.

10ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ 7 ಜಿಲ್ಲೆಗಳ 791 ಶಾಲೆಗಳನ್ನು 'ವಿಲೀನ'ದ ಹೆಸರಿನಲ್ಲಿ ಮುಚ್ಚುವಂತೆ ಅಧಿಕಾರಿಗಳಿಗೆ ಸರ್ಕಾರ ಈ ಹಿಂದಷ್ಟೇ ಸುತ್ತೋಲೆ ಹೊರಡಿಸಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ಸುತ್ತೋಲೆಯನ್ನು ಹೊರಡಿಸಿದ್ದು, 3000 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ. ಇದರಂತೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮತ್ತೆ 27 ಶೈಕ್ಷಣಿಕ ಜಿಲ್ಲೆಗಳ 2,368 ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಕುತ್ತು ಬಂದಂತಾಗಿದೆ.

ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರು ಈ ಸುತ್ತೋಲೆಯನ್ನು ಹೊರಡಿಸಿದ್ದು, ಈಗಾಗಲೇ ಶಾಲೆಗಳಲ್ಲಿ ದಾಖಲಾತಿ ಹೊಂದಿರುವ 31 ಮಕ್ಕಳನ್ನು 1 ಕಿ.ಮೀ ನಷ್ಟು ದೂರದಲ್ಲಿರುವ ವಿಲೀನಗೊಂಡ ಶಾಲೆಗಳಲ್ಲಿ ದಾಖಲು ಮಾಡುವಂತೆ ತಿಳಿಸಿದೆ. ಒಂದು ವೇಳೆ ಸ್ಥಳೀಯ ಅಧಿಕಾರಿಗಳು ಮಕ್ಕಳಿಗೆ ಹತ್ತಿರವಾಗುವ ಶಾಲೆಗಳು ಸಿಗದಿದ್ದ ಪಕ್ಷದಲ್ಲಿ ಅವರೇ ಇತರೆ ಶಾಲೆಗಳಿಗೆ ದಾಖಲು ಮಾಡುವ ವ್ಯವಸ್ಥೆ ಮಾಡಬೇಕೆಂದು ಹೇಳಿದೆ.

ಇದರಂತೆ ಮಕ್ಕಳಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಅನುದಾನಿತ ಅಥವಾ ಅನುದಾನ ರಹಿತ ಶಾಲೆಗಳಲ್ಲಿ ದಾಖಲು ಮಾಡಲು ಸರ್ಕಾರ ನಿರ್ಧರಿಸಿದೆ.

ಎಲ್ಲೆಲ್ಲಿ, ಎಷ್ಟೆಷ್ಟು ಶಾಲೆಗಳು...?
ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಕಾರ ಹಾಸನ ಒಂದರಲ್ಲೇ ಬರೋಬ್ಬರಿ 320 ಶಾಲೆಗಳನ್ನು ಮುಚ್ಚಲಾಗುತ್ತಿದ್ದು, ಗದಗ್ 2, ಬೆಂಗಳೂರು ಗ್ರಾಮಾಂತರ 146, ಬೆಂಗಳೂರು ಉತ್ತರ ಭಾಗ 19 ಮತ್ತು ಬೆಂಗಳೂರು ದಕ್ಷಿಣ ಭಾಗದಲ್ಲಿ 42 ಶಾಲೆಗಲನ್ನು ಮುಚ್ಚಸಲು ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ಕನ್ನಡ ಮಾಧ್ಯಮ ಶಾಲೆಗಳೇ ಹೆಚ್ಚು?
ರಾಜ್ಯ ಸರ್ಕಾರ ವಿಲೀನದ ಹೆಸರಿನಲ್ಲಿ ಮುಚ್ಚುತ್ತಿರುವ ಶಾಲೆಗಳ ಪೈಕಿ ಬಹುತೇಕ ಶಾಲೆಗಳು ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳೇ ಆಗಿವೆ ಎಂದು ಹೇಳಲಾತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ನೀಡಲು ನಿರಾಕರಿಸಿವೆ ಎನ್ನಲಾಗುತ್ತಿದೆ.

ಇನ್ನು ಸರ್ಕಾರ ಈ ನಿಲುವಿಗೆ ಶಿಕ್ಷಣ ತಜ್ಞರು ಟೀಕೆ ಮಾಡುತ್ತಿದ್ದು, ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ. ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಲು ಸಾರ್ವಜನಿಕರ ಬೆಂಬಲ ಅಗತ್ಯವಿದ್ದು, ನಿರ್ಧಾರದ ವಿರುದ್ಧ ಜನರು ಮುಖ್ಯಮಂತ್ರಿಯವರಿಗೆ ಇಮೇಲ್ ಕಳುಹಿಸಬೇಕೆಂದು ನಿರಂಜನ್ ಆರಾಧ್ಯ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com