ವರ್ತೂರು ಕೆರೆಗೆ ಗಡಿ ನಿಗದಿ ಅಗತ್ಯ: ತಜ್ಞರ ಸಮಿತಿ

ನಗರದಲ್ಲಿರುವ ವರ್ತೂರು ಕೆರೆಗೆ ಮೊದಲು ಗಡಿ ನಿಗಡಿಪಡಿಸಬೇಕೆಂದು ತಜ್ಞರ ಸಮಿತಿ ಗುರುವಾರ ಅಭಿಪ್ರಾಯಪಟ್ಟಿದೆ...
ವರ್ತೂರು ಕೆರೆಗೆ ಭೇಟಿ ನೀಡಿದ ಪರಿಶೀಲನೆ ನಡೆಸುತ್ತಿರುವ ಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ನೇತೃತ್ವದ ತಜ್ಞರ ಸಮಿತಿ
ವರ್ತೂರು ಕೆರೆಗೆ ಭೇಟಿ ನೀಡಿದ ಪರಿಶೀಲನೆ ನಡೆಸುತ್ತಿರುವ ಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ನೇತೃತ್ವದ ತಜ್ಞರ ಸಮಿತಿ

ಬೆಂಗಳೂರು: ನಗರದಲ್ಲಿರುವ ವರ್ತೂರು ಕೆರೆಗೆ ಮೊದಲು ಗಡಿ ನಿಗಡಿಪಡಿಸಬೇಕೆಂದು ತಜ್ಞರ ಸಮಿತಿ ಗುರುವಾರ ಅಭಿಪ್ರಾಯಪಟ್ಟಿದೆ.

ನಿನ್ನೆಯಷ್ಟೇ ವರ್ತೂರು ಕೆರೆಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ನೇತೃತ್ವದ ತಜ್ಞರ ಸಮಿತಿ ಭೇಟಿ ನೀಡಿದ್ದು, ಕೆರೆ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿತು.

ನಂತರ ಮಾತನಾಡಿರುವ ತಜ್ಞರ ಸಮಿತಿ ತಂಡ, ಕೆರೆಗೆ ಮೊದಲು ಗಡಿಯನ್ನು ನಿಗದಿಪಡಿಸುವ ಅಗತ್ಯವಿದೆ. ನಂತರವಷ್ಟೇ ಅಗತ್ಯ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಗಡಿ ನಿಗದಿಯಾದ ಕೂಡಲೇ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.

ಇನ್ನು ಕೆರೆಯ ಮಾಲಿನ್ಯ ಹಾಗೂ ಅದರ ದುಷ್ಟರಿಣಾಮಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತಂತೆ ಸ್ಥಳೀಯರು ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ, ನಂತರ ಅಧಿಕಾರಿಗಳ ತಂಡ ಕೆರೆಯ ಒಳಹಿರಿವು ಹಾಗೂ ಹೊರ ಹರಿವುಗಳನ್ನು ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com