
ಕುಂದಾಪುರ: ಸಾಮಾಜಿಕ ಜಾಲತಾಣದಲ್ಲಿ ನಗ್ನ ವಿಡಿಯೋ ಹಾಕುವುದಾಗಿ ಯುವತಿಯೊಬ್ಬಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನೊಬ್ಬನನ್ನು ಶಂಕರನಾರಾಯಣ ಠಾಣಾ ಪೋಲೀಸರು ಬಂಧನಕ್ಕೊಳಪಡಿಸಿರುವ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಶುಕ್ರವಾರ ನಡೆದಿದೆ.
ಸಂತೋಷ್ ಪೂಜಾರಿ ಬಂಧನಕ್ಕೊಳಗಾದ ಯುವಕ. ಹಲವು ದಿನಗಳಿಂದ ಯುವತಿಯೊಬ್ಬಳ ನಗ್ನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಯುವತಿಯೊಬ್ಬಳಿಗೆ ಬೆದರಿಕೆ ಹಾಕುತ್ತಿದ್ದ ಎಂಬ ಆರೋಪದ ಮೇಲೆ ಪೊಲೀಸರು ಈತನನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಯುವತಿಯ ಮಾಜಿ ಗೆಳೆಯನಾಗಿದ್ದ ಸುದರ್ಶನ್ ಶೆಟ್ಟಿ ಎಂಬುವವನು ಯುವತಿಯ ಅರಿವಿಗೆ ಬಾರದಂತೆ ಆಕೆಯ ವಿಡಿಯೋ ಮಾಡಿದ್ದಾನೆ. ಇದರಂತೆ ಕೆಲವು ದಿನಗಳ ಹಿಂದೆ ಸಂತೋಷ್ ಪೂಜಾರಿಗೆ ಈ ವಿಡಿಯೋ ಕಳುಹಿಸಿದ್ದ ಎನ್ನಲಾಗಿದೆ. ಇದೀಗ ಸುದರ್ಶನ್ ತಲೆಮರೆಸಿಕೊಂಡಿದ್ದು, ಪೊಲೀಸರು ಈತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Advertisement