ಅವಧಿ ಮುಗಿದ ರು.10 ಕೋಟಿ ಮೌಲ್ಯ ಔಷಧಿಗಳನ್ನು ಹೊರಹಾಕಲಾಗುತ್ತದೆ: ಖಾದರ್

ಆರೋಗ್ಯ ಇಲಾಖೆಯ ಗೋದಾಮುಗಳಲ್ಲಿರುವ ಅವಧಿ ಮುಗಿದ ರು.10 ಕೋಟಿ ಮೌಲ್ಯ ಔಷಧಿಗಳನ್ನು ಶೀಘ್ರದಲ್ಲೇ ಹೊರಹಾಕಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್...
ಆರೋಗ್ಯ ಸಚಿವ ಯು.ಟಿ.ಖಾದರ್
ಆರೋಗ್ಯ ಸಚಿವ ಯು.ಟಿ.ಖಾದರ್

ಮೈಸೂರು: ಆರೋಗ್ಯ ಇಲಾಖೆಯ ಗೋದಾಮುಗಳಲ್ಲಿರುವ ಅವಧಿ ಮುಗಿದ ರು.10 ಕೋಟಿ ಮೌಲ್ಯ ಔಷಧಿಗಳನ್ನು ಶೀಘ್ರದಲ್ಲೇ ಹೊರಹಾಕಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಅವಧಿ ಮುಗಿದ ಔಷಧಿಗಳನ್ನು ಹೊರಹಾಕುವ ಸಲುವಾಗಿ ಸರ್ಕಾರ ಔಷಧ ವಿಲೇವಾರಿ ನೀತಿಯೊಂದನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಆವಧಿ ಮುಗಿದ ಔಷಧಿಗಳಿಂದ ಹೊರಹಾಕಲಾಗುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು. ಟೆಂಡರ್ ನಂತರ ಎಲ್ಲಾ ಔಷಧಿ ಗೌದಾಮುಗಳನ್ನು ಪರಿಶೀಲಿಸಿ ಅವಧಿ ಮುಗಿದ ಔಷಧಿಗಳನ್ನು ಹೊರಹಾಕಲಾಗುತ್ತದೆ. ಪ್ರತೀ ಜಿಲ್ಲೆಯಲ್ಲೂ 4 ತಿಂಗಳ ಅವಧಿಯಲ್ಲಿ ರು. 35 ಲಕ್ಷದಷ್ಟು ಔಷಧಿಗಳ ಅವಧಿ ಮುಗಿದಿರುತ್ತದೆ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲೇ ಔಷಧಿಗಳು ಹೆಚ್ಚಾಗಿ ಮಾರಾಟವಾಗದೆ, ಅವುಗಳ ಅವಧಿ ಮುಗಿದು ಹೋಗಿರುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com