ಬೆಂಗಳೂರು: ಆರ್ ಟಇ ಅಡಿ ಪ್ರವೇಶಕ್ಕೆ ಹೆಚ್ಚುವರಿ ಶುಲ್ಕ ವಿರೋಧಿಸಿದ ಇಬ್ಬರು ಪೋಷಕರ ಬಂಧನ

ಶಿಕ್ಷಣ ಹಕ್ಕು ಕಾಯ್ದೆ(ಆರ್ ಟಿಇ)ಯಡಿ ಪ್ರವೇಶಕ್ಕೆ ಹೆಚ್ಚುವರಿ ಶುಲ್ಕ ವಿಧಿಸುತ್ತಿದ್ದ ಖಾಸಗಿ ಶಾಲೆಯ ವಿರುದ್ಧ ಪ್ರತಿಭಟಿಸಿದ ಇಬ್ಬರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ(ಆರ್ ಟಿಇ)ಯಡಿ ಪ್ರವೇಶಕ್ಕೆ ಹೆಚ್ಚುವರಿ ಶುಲ್ಕ ವಿಧಿಸುತ್ತಿದ್ದ ಖಾಸಗಿ ಶಾಲೆಯ ವಿರುದ್ಧ ಪ್ರತಿಭಟಿಸಿದ ಇಬ್ಬರು ಪೋಷಕರನ್ನು ಬೆಂಗಳೂರು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತ ಇಬ್ಬರು ಪೋಷಕರ ಮಕ್ಕಳು ನಗರದ ಕುರುಬರಹಳ್ಳಿಯ ಸೆಂಟ್ ಆಂಟೋನಿ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದು, ಆರ್ ಟಿಇ ಅಡಿ ಪ್ರವೇಶ ನೀಡಲು ಹೆಚ್ಚುವರಿ ಶುಲ್ಕ ಕೇಳಿದ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ನಾವು ಪ್ರತಿಭಟಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ಶಾಲೆಯ ಆಡಳಿತ ಮಂಡಳಿ ಪೋಷಕರಾದ ಸುರೇಶ್ ಕುಮಾರ್ ಮತ್ತು ಕಂಪೇಗೌಡ ತಮ್ಮ ಸಿಬ್ಬಂದಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದೆ.
ನಿನ್ನೆ ಸುಮಾರು 50ಕ್ಕೂ ಹೆಚ್ಚು ಪೋಷಕರು ಹೆಚ್ಚುವರಿ ಶುಲ್ಕ ಕೇಳಿದೆ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟಿಸಿದ್ದರು. ಈ ವೇಳೆ ಪೋಷಕರು ಮತ್ತು ಸಿಬ್ಬಂದಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. 
ಈ ಘಟನೆಯ ನಂತರ ಸುರೇಶ್ ಕುಮಾರ್ ಮತ್ತು ಕೆಂಪೇಗೌಡ ತಮ್ಮ ಸಿಬ್ಬಂದಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಶಾಲಾ ಆಡಳಿತ ಮಂಡಳಿ ಸಂಜೆ ಮಾಹಾಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದೆ. ದೂರು ದಾಖಲಿಸಿಕೊಂಡ ಪೊಲೀಸರು ಈ ಇಬ್ಬರು ಪೋಷಕರನ್ನು ವಶಕ್ಕೆ ಪಡೆದಿದ್ದಾರೆ.
ಈ ಮಧ್ಯೆ, ಶಾಲಾ ಆಡಳಿತ ಮಂಡಳಿ ಪೋಷಕರ ವಿರುದ್ಧ ಸುಳ್ಳು ದೂರು ದಾಖಲಿಸಿದೆ ಎಂದಿರುವ ಆರ್ ಟಿಇ ಟಾಸ್ಕ್ ಪೊರ್ಸ್ ಅಧಿಕಾರಿ ನಾಗಸಿಂಹ ಜಿ ರಾವ್ ಅವರು, ಶಾಲಾ ಆಡಳಿತ ಮಂಡಳಿ ಆರ್ ಟಿಇ ಅಡಿ ಪ್ರವೇಶ ನೀಡಲು 15ರಿಂದ 20 ಸಾವಿರ ರುಪಾಯಿಗೆ ಬೇಡಿಕೆಯಿಟ್ಟಿದೆ. ಇದರ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com