ಸ್ವಯಂ ಚಾಲಿತ ಟೋಕನ್ ವಿತರಣಾ ಯಂತ್ರಕ್ಕೆ ಮೆಟ್ರೋ ಚಿಂತನೆ

ರಸ್ತೆ ಸಂಚಾರ ದಟ್ಟಣೆಯಿಂದ ಬೇಸತ್ತು ಮೆಟ್ರೋದಲ್ಲಿ ಸಂಚಾರ ಮಾಡಬೇಕೆಂಬ ನಗರ ಜನತೆಯ ಬಹುದಿನಗಳ ಕನಸ್ಸನ್ನು ನನಸು ಮಾಡಿರುವ ಸರ್ಕಾರ ಇದೀಗ ಪ್ರಯಾಣಿಕರ ಸಂಕಷ್ಟಗಳ...
ಸ್ವಯಂ ಚಾಲಿತ ಟೋಕನ್ ವಿತರಣಾ ಯಂತ್ರಕ್ಕೆ ಮೆಟ್ರೋ ಚಿಂತನೆ
ಸ್ವಯಂ ಚಾಲಿತ ಟೋಕನ್ ವಿತರಣಾ ಯಂತ್ರಕ್ಕೆ ಮೆಟ್ರೋ ಚಿಂತನೆ

ಬೆಂಗಳೂರು: ರಸ್ತೆ ಸಂಚಾರ ದಟ್ಟಣೆಯಿಂದ ಬೇಸತ್ತು ಮೆಟ್ರೋದಲ್ಲಿ ಸಂಚಾರ ಮಾಡಬೇಕೆಂಬ ನಗರ ಜನತೆಯ ಬಹುದಿನಗಳ ಕನಸ್ಸನ್ನು ನನಸು ಮಾಡಿರುವ ಸರ್ಕಾರ ಇದೀಗ ಪ್ರಯಾಣಿಕರ ಸಂಕಷ್ಟಗಳ ಕಡೆ ಗಮನ ಹರಿಸಿದ್ದು, ಇದೀಗ ಸ್ವಯಂ ಚಾಲಿಕ ಟೋಕನ್ ನೀಡುವ ಯಂತ್ರಗಳ ಸ್ಥಾಪಿಸಲು ಚಿಂತನೆ ನಡೆಸಿದೆ.

ಮೆಟ್ರೋ ನಿಲ್ದಾಣದಲ್ಲಿ ಟೋಕನ್ ಪಡೆಯಲು ಸಾಲಿನಲ್ಲಿ ನಿಂತು ಸಂಕಷ್ಟು ಎದುರಿಸಿದ್ದ ಜನತೆ ಈ ಬಗ್ಗೆ ಕೆಲ ಅಸಮಾಧಾನಗಳನ್ನು ಹೊರಹಾಕುತ್ತಿತ್ತು. ಹೀಗಾಗಿ, ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿರುವ ಮೆಟ್ರೋ ಅಧಿಕಾರಿಗಳು ಇದೀಗ ಸ್ವಯಂ ಚಾಲಿಕ ಟೋಕನ್ ನೀಡುವ ಯಂತ್ರಗಳನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ.

ಮೆಟ್ರೋ ನಿಲ್ದಾಣದಲ್ಲಿ ಚಲಿಸುವ ಸ್ಥಳಗಳಲ್ಲಿಯೇ ಈ ಯಂತ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಈ ಯಂತ್ರಗಳು ಪ್ರಯಾಣಿಕರಿಗೆ ಟೋಕನ್ ಗಳು ಹಾಗೂ ಮೆಟ್ರೋ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಣೆ ಮಾಡಲಿದೆ.

ಪ್ರಾಥಮಿಕ ಹಂತದಲ್ಲಿ ಎರಡು ಯಂತ್ರಗಳನ್ನು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಇಂದು ಸ್ಥಾಪನೆ ಮಾಡಲಾಗುತ್ತಿದ್ದು, ಸಿಬ್ಬಂದಿಗಳು ಯಂತ್ರಗಳನ್ನು ನೋಡಿಕೊಳ್ಳುತ್ತಾರೆ. ಇದರ ನಂತರ ಇನ್ನುಳಿದ ನಿಲ್ದಾಣಗಳಲ್ಲೂ ಸ್ಥಾಪನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com