ಅಹಮದಾಬಾದ್ ಸರಣಿ ಸ್ಫೋಟ: ಬೆಳಗಾವಿಯಲ್ಲಿ ಆರೋಪಿ ಬಂಧನ

2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ನ ಉಗ್ರ ನಿಗ್ರಹ ದಳ(ಎಟಿಎಸ್) ಬೆಳಗಾವಿಯಲ್ಲಿ...
ನಾಸಿರ್
ನಾಸಿರ್
ಬೆಳಗಾವಿ: 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ನ ಉಗ್ರ ನಿಗ್ರಹ ದಳ(ಎಟಿಎಸ್) ಬೆಳಗಾವಿಯಲ್ಲಿ ಆರೋಪಿಯನ್ನು ಬಂಧಿಸಿದೆ.
ಬೆಳಗಾವಿ ಮೂಲದ ನಾಸಿರ್ ಅಲಿಯಾಸ್ ಪರ್ವೇಜ್ ರಂಗ್ರೇಜ್ (38) ಎಂಬ ಆರೋಪಿಯನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದು, ಆರೋಪಿ ನಗರದಲ್ಲಿ ಆಟೋ ಚಾಲಕನಾಗಿದ್ದ ಎನ್ನಲಾಗಿದೆ.  
ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರ ನೆರವಿನೊಂದಿಗೆ ಎಟಿಎಸ್ ಅಧಿಕಾರಿ ಭವೇಶ ನೇತೃತ್ವದಲ್ಲಿ ತಂಡ ನಾಸಿರ್ ನನ್ನು ಬಂಧಿಸಿದೆ ಎಂದು ಸಹಾಯಕ ಪೊಲೀಸ್ ಅಮರನಾಥ್ ರೆಡ್ಡಿ ಅವರು ಸೋಮವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ರಂಗ್ರೇಜ್, ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತನಾಗಿದ್ದು ಇಂಡಿಯನ್ ಮುಜಾಹಿದ್ದೀನ್‌ ಸಂಘಟನೆಯ ಜೊತೆಗೂ ಸಂಪರ್ಕಹೊದ್ದಿದ್ದನು. ಗುಜರಾತ್‌ನ ಗೋಧ್ರಾ ಹತ್ಯಾಕಾಂಡದಲ್ಲಿ ಮೃತ ಪಟ್ಟ ಮುಸ್ಲಿಂ ಪರವಾಗಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಈತ ತನ್ನ ಸಂಗಡಿಗರ ಜೊತೆಗೂಡಿ ಸಿಮಿ ಹಾಗೂ ಐಎಂನಲ್ಲಿ ನೇಮಕವಾದ ಉಗ್ರಿರಿಗೆ ಗುಜರಾತ್‌ನ ಪಾವಗಡ, ಮಧ್ಯಪ್ರದೇಶದ ಕಂಡ್ವಾ ಹಾಗೂ ಕೇರಳದ ವಾಗಾಮಾನ್‌ನಲ್ಲಿ ತರಬೇತಿ ನೀಡಿದ್ದನು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com