ಕುಂದಾಪುರದ ತ್ರಾಸಿ ಬಳಿ ಭೀಕರ ಅಪಘಾತ: 8 ಶಾಲಾಮಕ್ಕಳ ದಾರುಣ ಸಾವು

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಾರುತಿ ಒಮ್ನಿ ಗೆ ಖಾಸಗಿ ಬಸ್ ಡಿಕ್ಕಿಯಾಗಿ 8 ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಭೀಕರ ಘಟನೆ ತ್ರಾಸಿ ಬಳಿ ರಾಷ್ಟ್ರೀಯ..
ಅಪಘಾತಕ್ಕೊಳಗಾದ ಒಮ್ನಿ ಕಾರು
ಅಪಘಾತಕ್ಕೊಳಗಾದ ಒಮ್ನಿ ಕಾರು
Updated on: 

ಕುಂದಾಪುರ:  ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಾರುತಿ ಒಮ್ನಿ ಗೆ ಖಾಸಗಿ ಬಸ್  ಡಿಕ್ಕಿಯಾಗಿ 8 ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಭೀಕರ ಘಟನೆ ತ್ರಾಸಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಮೊವಾಡಿ ಕ್ರಾಸ್‌ ನವಲ್ಲಿ ನಡೆದಿದೆ.

ಮೃತರು ಡಾನ್ ಬಾಸ್ಕೋ ಶಾಲೆ ಮಕ್ಕಳು ಎನ್ನಲಾಗಿದೆ. ಶಾಲಾ ಬಸ್ ಮತ್ತು ಖಾಸಗಿ ಬಸ್ ನಡುವೆ ಬೆಳಗ್ಗೆ 9.45ರ ಸಮಯದಲ್ಲಿ ಮುಖಾಮುಖಿ ಢಿಕ್ಕಿಯಾಗಿದೆ. ಇದರಿಂದ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ತೀವ್ರವಾಗಿ ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ 6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಅಪಗಾತದಲ್ಲಿ 11 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಸ್ಥಲೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವಘಡದಲ್ಲಿ ಒಮ್ನಿಯಲ್ಲಿದ್ದ 5 ಮಕ್ಕಳು, ಚಾಲಕ ಮತ್ತು ಆತನ ಪತ್ನಿ ಶಾಲಾ  ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮಕ್ಕಳೆಲ್ಲರು ಹೆಮ್ಮಾಡಿ, ತಲ್ಲೂರು ಪರಿಸರದವರಾಗಿದ್ದು, ಎಲ್‌ಕೆಜಿ, ಯುಕೆಜಿ ನರ್ಸರಿಗೆ ಸೇರಿದವರು ಎಂದು ತಿಳಿದು ಬಂದಿದೆ.

ಅಪಘಾತ ನಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು. ಭಾರೀ ಮಳೆ ಪರಿಣಾಮ ತುರ್ತು ಕಾರ್ಯಾಚರಣೆಗೆ ಅಡ್ಡಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com