ಬೆಂಗಳೂರು : ಪ್ರತಿದಿನ ಸರಿಸುಮಾರು 60 ಡ್ರೈವಿಂಗ್ ಲೈಸೆನ್ಸ್ ಅಮಾನತು

ವರ್ಷದಿಂದ ವರ್ಷಕ್ಕೆ ಡ್ರೈವಿಂಗ್ ಲೈಸೆನ್ಸ್ ಅಮಾನತು ಪ್ರಮಾಣ ಹೆಚ್ಚುತ್ತಿದ್ದು, ಸಾವಿರಾರು ಚಾಲಕರು ತಮ್ಮ ಚಾಲನ ಪರವಾನಗಿ ಕಳೆದು ಕೊಳ್ಳುತ್ತಿದ್ದಾರೆ. 2012 ರಲ್ಲಿ 5,587 ಇದ್ದದ್ದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂದಿನ ಬಾರಿ ನಿವೇನಾದ್ರೂ ಸಂಚಾರ ನಿಯಮ ಉಲ್ಲಂಘನೆ, ವೇಗದ ಚಾಲನೆ, ಅಥವಾ ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕರೇ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಕ್ಷಮೆಯಂತೂ ಸಿಗೋದೆ ಇಲ್ಲ. ಜಾಮೀನಿಗಾಗಿ ತೆರಳಬೇಕಾದೀತು.

ವರ್ಷದಿಂದ ವರ್ಷಕ್ಕೆ ಡ್ರೈವಿಂಗ್ ಲೈಸೆನ್ಸ್ ಅಮಾನತು ಪ್ರಮಾಣ ಹೆಚ್ಚುತ್ತಿದ್ದು, ಸಾವಿರಾರು ಚಾಲಕರು ತಮ್ಮ ಚಾಲನ ಪರವಾನಗಿ ಕಳೆದು ಕೊಳ್ಳುತ್ತಿದ್ದಾರೆ. 2012 ರಲ್ಲಿ 5,587 ಇದ್ದದ್ದು 2015ರಲ್ಲಿ 21,758 ರಷ್ಟು ಏರಿಕೆಯಾಗಿದೆ, ಅಂದರೆ ಪ್ರತಿದಿನ ಸುಮಾರು 60 ಚಾಲಕರ ಪರವಾನಗಿ ರದ್ದಾಗುತ್ತಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಡ್ರೈವಿಂಗ್ ಲೈಸೆನ್ಸ್ ಅಮಾನತು ಗೊಳ್ಳುವವರ ಪೈಕಿ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿ ಹಾಕಿಕೊಂಡವರೇ ಹೆಚ್ಚು, ಪದೇ ಪದೇ ಕುಡಿದು ಚಾಲನೆ ಮಾಡುವ ಡ್ರೈವರ್ ಗಳ ಲೈಸೆನ್ಸ್ ರದ್ದು ಪಡಿಸಲಾಗುತ್ತಿದೆ ಎಂದು ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಆರ್ ಹಿತೇಂದ್ರ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ಅಪಘಾತದ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗಿರುವುದು ತಿಳಿದು ಬಂದಿದೆ.

ಚಾಲನಾ ಪರವಾನಗಿ ಅಮಾನತು ಆಗುತ್ತದೆ ಹಾಗೂ ಹಲವು ಕಾನೂನು ಕ್ರಮ ಎದುರಿಸಬೇಕು ಎಂಬ ಭಯದಲ್ಲಿ ಚಾಲಕರು ಕುಡಿದು ವಾಹನ ಚಾಲನೆ ಮಾಡುವುದನ್ನು ತಪ್ಪಿಸಿದ್ದಾರೆ  ಹೀಗಾಗಿ ಅಪಘಾತಗಳ ಸಂಖ್ಯೆ ಇಲಿಮುಖವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಡ್ರಂಕ್ ಅಂಡ್ ಡ್ರೈವ್, ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಕೆ, ಸರಕು ಸಾಗಣೆ ಮಾಡುವಾಗ ಹೆಚ್ಚಿನ ಹಣದ ಬೇಡಿಕೆ, ಹಿಟ್ ಅಂಡ್ ರನ್ ಕೇಸ್, ಫುಟ್ ಪಾತ್ ನಲ್ಲಿ ಚಾಲನೆ, ಮತ್ತು ವೇಗವಾಗಿ ಚಾಲನೆ ಕಾರಣಗಳಿಗಾಗಿ ಡೈವಿಂಗ್ ಲೈಸೆನ್ಸ್ ಹೆಚ್ಚಿನ ಪ್ರಮಾಣದಲ್ಲಿ ಅಮಾನತುಗೊಂಡಿದೆ.

ಭಾರತೀಯ ಮೋಟಾರು ವಾಹನ ಕಾಯಿದೆ 19 ಹಾಗೂ 21ರ ನಿಯಮದಂತೆ 6 ತಿಂಗಳುಗಳ ಕಾಲ ವಾಹನ ಪರವಾನಗಿ ರದ್ದು ಪಡಿಸುವಂತೆ ಕೋರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಶಿಫಾರಸ್ಸು ಮಾಡಿರುವುದಾಗಿ ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com