ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ ಶಿಕ್ಷೆಯ ಪ್ರಮಾಣ ಶೇಕಡಾ 3ಕ್ಕಿಂತ ಕಡಿಮೆ

ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ ಕೂಡ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಕ್ಕಳ ಮೇಲೆ...
ಮಹಿಳೆಯರ ಮೇಲಿನ ದೌರ್ಜನ್ಯ ತಡೆ ತಜ್ಞರ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ
ಮಹಿಳೆಯರ ಮೇಲಿನ ದೌರ್ಜನ್ಯ ತಡೆ ತಜ್ಞರ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ
Updated on

ಬೆಂಗಳೂರು: ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ ಕೂಡ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಕ್ಕಳ ಮೇಲೆ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗುವವರ ಪ್ರಮಾಣ ರಾಜ್ಯದಲ್ಲಿ ಶೇಕಡಾ 3ಕ್ಕಿಂತ ಕಡಿಮೆಯಿದೆ ಹಾಗೂ ಈ ರೀತಿ ದೌರ್ಜನ್ಯಕ್ಕೊಳಗಾದವರ ಕುಟುಂಬದವರು ಪರಿಹಾರ ಪಡೆಯುವವರ ಸಂಖ್ಯೆ ಶೇಕಡಾ 5ಕ್ಕಿಂತಲೂ ಕಡಿಮೆಯಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ತಡೆ ತಜ್ಞರ ಸಮಿತಿಯ ಅಧ್ಯಕ್ಷ ಮತ್ತು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರ ತಂಡ ಈ ವಿಚಾರವನ್ನು ಬಹಿರಂಗಗೊಳಿಸಿದೆ. ಸಮಿತಿ ಅವಧಿ ಜೂನ್ 30ಕ್ಕೆ ಮುಗಿದಿದೆ.

 ಲೈಂಗಿಕ ಅಪರಾಧಗಳಿಗೆ ರಾಷ್ಟ್ರಮಟ್ಟದಲ್ಲಿ ಶಿಕ್ಷೆಯಾಗುವ ಪ್ರಮಾಣ ಶೇಕಡಾ 2.8ರಷ್ಟಿದೆ.
ಕಳೆದ ಮೂರು ವರ್ಷಗಳಲ್ಲಿ ಸಮಿತಿ ಮಾಡಿರುವ ಕೆಲಸದ ಬಗ್ಗೆ ವಿವರಿಸಿದ ಉಗ್ರಪ್ಪ, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಮಾಣ ಮೈಸೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅಧಿಕವಾಗಿದ್ದು, ತಲಾ ಶೇಕಡಾ 4ರಷ್ಟಿದೆ. ಉಡುಪಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಡಿಮೆ ಅಂದರೆ ಶೇಕಡಾ 1.7 ಮತ್ತು 1.6ರಷ್ಟಿದೆ.

ನಿರ್ಭಯಾ ನಿಧಿಯ ಕಳಪೆ ಬಳಕೆ: ಕರ್ನಾಟಕದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಅನೇಕ ದೌರ್ಜನ್ಯ ಪ್ರಕರಣಗಳು ದಾಖಲಾದರೂ ಕೂಡ, ಕಳೆದ ಮೂರು ವರ್ಷಗಳಲ್ಲಿ ನಿರ್ಭಯಾ ನಿಧಿಯಿಂದ ಸಂತ್ರಸ್ತರಿಗೆ ಒಂದು ರೂಪಾಯಿ ಕೂಡ ಬಳಕೆಯಾಗಿಲ್ಲ.

ಆಸಿಡ್ ದಾಳಿ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಕನಿಷ್ಟ 3 ಲಕ್ಷ ರೂಪಾಯಿ, ಅಪ್ರಾಪ್ತರಿಗೆ ದೈಹಿಕ ಕಿರುಕುಳ ನಡೆಸಿದರೆ ತಲಾ 2 ಲಕ್ಷ ರೂಪಾಯಿ, ಲೈಂಗಿಕ ಹಲ್ಲೆಗೆ 50 ಸಾವಿರ ರೂಪಾಯಿ ಮತ್ತು ಮಾನವ ಸಾಗಾಣಿಕೆಗೆ ಬಲಿಯಾದವರ ಪುನರ್ವಸತಿಗೆ 2 ಲಕ್ಷ ರೂಪಾಯಿ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಆದರೆ ಅದನ್ನು ರಾಜ್ಯ ಸರ್ಕಾರ ಇದುವರೆಗೆ ಸಂತ್ರಸ್ತರಿಗೆ ನೀಡಿಲ್ಲ ಎಂದು ಸಮಿತಿಯ ಅಧ್ಯಯನದಿಂದ ತಿಳಿದುಬಂದಿದೆ.

ಲೈಂಗಿಕ ದೌರ್ಜನ್ಯಕ್ಕೊಳಗಾದವರ ಕುಟುಂಬದವರಿಗೆ ಪರಿಹಾರ ನೀಡುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ. ಈಗಿರುವ ಹಣದ ಬಗ್ಗೆ ಅಸಡ್ಡೆ ಮತ್ತು ಕೇಂದ್ರ ಸರ್ಕಾರದ ಕಾನೂನು ಈಗಿರುವ ನಿಧಿ ಬಳಕೆಯನ್ನು ಉಪಯೋಗ ಮಾಡುವಲ್ಲಿ ವಿಫಲವಾಗಲು ಕಾರಣ ಎಂದು ತಿಳಿದುಬಂದಿದೆ ಎಂದು ಉಗ್ರಪ್ಪ ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಸಮಿತಿ ಸಲ್ಲಿಸಿದ ಮಧ್ಯಂತರ ವರದಿಯ ಕುರಿತು ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಉಗ್ರಪ್ಪ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com