ಜಾತ್ರೆ ವೇಳೆ ಹೆಜ್ಜೇನು ದಾಳಿ: 25ಕ್ಕೂ ಹೆಚ್ಚು ಜನರಿಗೆ ಗಾಯ

ಜಾತ್ರೆ ಮಹೋತ್ಸವದ ವೇಳೆ ಹೆಜ್ಜೇನು ದಾಳಿಯಾಗಿದ್ದು, ಪರಿಣಾಮ 25 ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿ ಭಾನುವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಾತ್ರೆ ಮಹೋತ್ಸವದ ವೇಳೆ ಹೆಜ್ಜೇನು ದಾಳಿಯಾಗಿದ್ದು, ಪರಿಣಾಮ 25 ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿರುವ ಭೈರವೇಶ್ವರ ಜಾತ್ರಾ ಮಹೋತ್ಸವವೊಂದು ನಡೆಯುತ್ತಿತ್ತು. ಈ ವೇಳೆ ಮರದಲ್ಲಿದ್ದ ಹೆಜ್ಜೇನುಗಳು ಇದ್ದಕ್ಕಿದ್ದಂತೆ ನೆರೆದಿದ್ದ ಜನರ ಮೇಲೆ ದಾಳಿ ಮಾಡಿದೆ. ಪರಿಣಾಮ ಸ್ಥಳದಲ್ಲಿದ್ದ 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಕುದೂರು ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ಮಾಗಡಿ, ಕುಣಿಗಲ್, ತುಮಕೂರಿನ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com