
ಬೆಂಗಳೂರು: ಹೆಸರಿಗೆ ಅದು ವೆಜ್ ರೆಸ್ಟೋರೆಂಟ್ ಅದನ್ನು ನಂಬಿ ಅಲ್ಲಿಗೆ ಹೋದ ಜೈನ ಕುಟುಂಬವೊಂದು ವೆಜ್ ಬಿರಿಯಾನಿ ಬದಲಿಗೆ ಚಿಕನ್ ಬಿರಿಯಾನಿ ತಿನ್ನುವಂತಾಗಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಗಾಂಧಿನಗರದ ಕಾಳಿದಾಸ ರಸ್ತೆಯಲ್ಲಿರುವ ರಂಗೋಲಿ ರೆಸ್ಟೋರೆಂಟ್ ಗೆ ಕುಟುಂಬ ಸಮೇತರಾಗಿ ಬಂದ ಅಶ್ವಿನ್ ಸೆಮಲಾನಿ ವೆಜ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದರು. ಆದರೆ ರೆಸ್ಟೋರೆಂಟ್ ನವರು ಚಿಕಿನ್ ಬಿರಿಯಾನಿಯನ್ನು ಸರ್ವ್ ಮಾಡಿದ್ದು, ತಾವು ತಿಂದಿದ್ದು ಚಿಕನ್ ಬಿರಿಯಾನಿ ಎಂದು ತಿಳಿದ ಜೈನ ಕುಟುಂಬ ಇದೀಗ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದು, ದೂರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿದ್ದಾರೆ.
ರಂಗೋಲಿ ರೆಸ್ಟೋರೆಂಟ್ ಶುದ್ಧ ಸಸ್ಯಾಹಾರಿ ಹೊಟೇಲ್ ಆಗಿದ್ದು, ಇಲ್ಲಿನ ಬಾಣಸಿಗ ಹೊಟೇಲ್ ಅಕ್ಷಯ ಆರೋದಲ್ಲಿರುವ ಅತಿಥಿಗಳಿಗಾಗಿ ಮಾಂಸಾಹಾರವನ್ನು ತಯಾರಿಸಿದ್ದನು. ಇದನ್ನು ನೋಡದ ಸರ್ವರ್ ಜೈನ್ ಕುಟುಂಬಕ್ಕೆ ಚಿಕನ್ ಬಿರಿಯಾನಿಯನ್ನು ತಂದು ಕೊಟ್ಟಿದ್ದಾನೆ ಎಂದು ರಂಗೋಲಿ ಹೋಟೆಲ್ ನಿರ್ವಹಣಾಧಿಕಾರಿ ವಿವರಿಸಿದ್ದಾರೆ.
Advertisement