ಬೆಂಗಳೂರು: ಮಾರಾಕಾಸ್ತ್ರ ತೋರಿಸಿ ಹೆದರಿಸಿ ದರೋಡೆ ಮಾಡುತ್ತಿದ್ದ ಏಳು ಆರೋಪಿಗಳನ್ನು ಯಲಹಂಕ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಳೆದ ಸೋಮವಾರ ಎರಡು ಪೆಟ್ರೋಲ್ ಬಂಕ್ ನೌಕರರ ಬಳಿ ಇದ್ದ ರು.9 ಲಕ್ಷ ದರೋಡೆ ಮಾಡಿ ಈ ಗ್ಯಾಂಗ್ ಪರಾರಿಯಾಗಿದ್ದರು.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೊಡ್ಡಬಳ್ಳಾಪುರದ ಕೆಂಪೇಗೌಡ ಅಲಿಯಾಸ್ ಶಿವು, ಮಾಗಡಿ ತಾಲೂಕಿನ ಭದ್ರೇಶ್, ನವೀನ್, ದೊಡ್ಡಬಳ್ಳಾಪುರದರ ಶಿವ, ಸುಸ್ಸೇನ್ ಅಲಿಯಾಸ್ ಅಂಜು, ನಂದನ್ ಕುಮಾರ್ ಅಲಿಯಾಸ್ ನಂದನ್ ಗೋಸ್ವಾಮಿ ಮತ್ತು ಹೆಸರಘಟ್ಟ ನಿವಾಸಿ ಹರೀಶ್ ಬಂಧಿತ ಆರೋಪಿಗಳು.
ಆರೋಪಿಗಳಿಂದ ರು.7.3 ಲಕ್ಷ ನಗದು, ಮೂರು ಬೈಕ್, ಮಾರಾಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನು ಇಬ್ಬರು ಆರೋಪಿಗಳಾದ ನವೀನ್ ಮತ್ತು ಮಂಜು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.