ಈಗಾಗಲೇ ರಾಜ್ಯದಲ್ಲಿ 6,000ಕ್ಕಿಂತ ಹೆಚ್ಚು ಆನೆಗಳು ಇದ್ದು, ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತಿದೆ. ಆನೆಗಳ ದಾಳಿ ಹೆಚ್ಚಾಗುತ್ತಿದೆ. ದೇಶದಲ್ಲೇ ಕರ್ನಾಟಕದಲ್ಲಿ ಆನೆಗಳ ಸಂಖ್ಯೆ ಹೆಚ್ಚಿದೆ. ಬೇರೆ ರಾಜ್ಯ ಆನೆಗಳನ್ನು ದತ್ತು ಪಡೆದರೆ, ಸ್ವಲ್ಪ ಮಟ್ಟಿಗೆ ಆನೆಗಳಿಂದ ಎದುರಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.