ತೆರಿಗೆ ಅಧಿಕಾರಿಗಳಿಂದ ಸಿಎಂ ಆಪ್ತ ಕೆಂಪಯ್ಯ ವಿಚಾರಣೆ

ನಿವೃತ್ತ ಐಪಿಎಸ್‌ ಅಧಿಕಾರಿ ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ...
ಕೆಂಪಯ್ಯ
ಕೆಂಪಯ್ಯ

ಬೆಂಗಳೂರು: ನಿವೃತ್ತ ಐಪಿಎಸ್‌ ಅಧಿಕಾರಿ  ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ಈ ಹಿಂದೆ ಮೂವರು ವಿಧಾನಪರಿಷತ್‌ ಸದಸ್ಯರ ನಿವಾಸಗಳ ಮೇಲೆ ನಡೆದಿದ್ದ ಆದಾಯ ತೆರಿಗೆ ಇಲಾಖೆ ದಾಳಿ ಸಂದರ್ಭದಲ್ಲಿ ದೊರೆತಿದ್ದ ಡೈರಿಯಲ್ಲಿನ ಮಾಹಿತಿ ಆಧಾರದಲ್ಲಿ ಈ ವಿಚಾರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ವಿಧಾನಪರಿಷತ್‌ ಸದಸ್ಯರ ನಿವಾಸಗಳ ಮೇಲೆ ನಡೆದಿದ್ದ ದಾಳಿ ಸಂದರ್ಭದಲ್ಲಿ ದೊರೆತ ಡೈರಿಯಲ್ಲಿ ಕೆಂಪಯ್ಯ ಅವರ ಹೆಸರು ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಏಪ್ರಿಲ್‌ 27ರಂದು ಕೆಂಪಯ್ಯ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಅದರಂತೆ ಕೆಂಪಯ್ಯ ಅವರು ಬುಧವಾರ ಸಂಜೆ 5.10 ಕ್ಕೆ ನಗರದಲ್ಲಿರುವ ಆದಾಯ ತೆರಿಗೆ ಕಚೇರಿಗೆ ಆಗಮಿಸಿ ರಾತ್ರಿ 9 ಗಂಟೆವರೆಗೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದರು ಎಂದು ಹೇಳಲಾಗಿದೆ.

ವಿಧಾನಪರಿಷತ್‌ ಸದಸ್ಯರು ಕೆಂಪಯ್ಯ ಅವರೊಂದಿಗೆ ಸಂಭಾಷಣೆ ನಡೆಸಿರುವುದು ದೂರವಾಣಿ ಕರೆಗಳ ಲಿಸ್ಟ್‌ನಲ್ಲಿ ಪತ್ತೆಯಾಗಿದೆ. ಹೀಗಾಗಿ, ಅವರೊಂದಿಗಿನ ಸಂಪರ್ಕದ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದರು ಎಂದು ಹೇಳಲಾಗಿದೆ.

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಕೆಂಪಯ್ಯ, ನಾನು ಯಾವುದೇ ತಪ್ಪು ಮಾಡಿಲ್ಲ, ಕೆಲ ಮಾಧ್ಯಮಗಳು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ ಎಂದು ಕಿಡಿ ಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com