ನಕಲಿ ಆಧಾರ್ ಕಾರ್ಡ್ ಮಾರಾಟ ಮಾಡುತ್ತಿದ್ದವನ ಸೆರೆ

ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧವಾರ ಬಂಧಿಸಿದ್ದಾರೆ. 
ಒಡಿಶಾ ಮೂಲದ ಖಾಲಿದ್ ಖಾನ್(45) ಬಂಧಿತ ಆರೋಪಿ. ಬೊಮ್ಮನಹಳ್ಳಿಯಲ್ಲಿ ವಾಸವಾಗಿದ್ದ ಈತ ನಾಲ್ಕು ವರ್ಷದಿಂದ ಈ ದಂಧೆಯಲ್ಲಿ ತೊಡಗಿದ್ದು, ನಕಲಿ ಆಧಾರ್ ಕಾರ್ಡ್ ಗೆ 2 ಸಾವಿರ, ಚುನಾವಣಾ ಗುರುತಿನ ಚೀಟಿಗೆ 1 ಸಾವಿರ ಹಾಗೂ ಅಂಕಪಟ್ಟಿಗೆ ಒಂದು ಸಾವಿರ ಪಡೆಯುತ್ತಿದ್ದ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯ ರಸ್ತೆಯ ರಮಣ ಕಾಂಪ್ಲೆಕ್ಸ್ ನಲ್ಲಿ ಆತ ನೆಟ್ ಜೋನ್ ಕಂಪ್ಯೂಟರ್ ಸೆಂಟರ್ ಹಾಗೂ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದ. ತನ್ನ ಅಂಗಡಿಗೆ ಚೆರಾಕ್ಸ್ ಮಾಡಿಸಲು ಬರುತಿದ್ದ ಗಿರಾಕಿಗಳ ಗುರತಿನ ಚೀಟಿಗಳನ್ನು ಕಂಪ್ಯೂಟರ್ ನಲ್ಲಿ ಸ್ಕ್ಯಾನ್ ಮಾಡಿಕೊಂಡು ಇಟ್ಟುಕೊಳ್ಳುತ್ತಿದ್ದ. ನಕಲಿ ಮಾಡಿಸುವ ಗಿರಾಕಿಗಳು ಬಂದರೆ, ಹೆಸರು, ವಿಳಾಸ ಬದಲಾಯಿಸಿ ನಕಲಿ ಕಾರ್ಡ್ ಗಳನ್ನು ನೀಡುತ್ತಿದ್ದ. ಆರೋಪಿಯಿಂದ ಎಲೆಕ್ರ್ಟಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com