ಸ್ಥಳಿಯರ ಹೇಳಿಕೆ ಪ್ರಕಾರ, ನಿನ್ನೆ ಸಂಜೆ 7 ರವೇಳೆಗೆ ಮನೆಯಿಂದ ಹೊರಗಡೆ ಕಿರಣ್ ಕಾಣಿಸಿಕೊಂಡಿದ್ದಾರೆ. ತದ ನಂತರ ಕಾಣಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ, ಅವರ ಮನೆಯ ಪಕ್ಕದ ಕಾಲಿ ಜಾಗದಲ್ಲಿ ಕೆಲ ವ್ಯಕ್ತಿಗಳು ಬಂದು ಮಾವಿನ ಸಸಿ ನೆಟ್ಟಿ ಹೋಗಿರುವುದಾಗಿ ತಿಳಿದು ಬಂದಿದೆ. ಮನೆಯಲ್ಲಿ ಒಂಟಿಯಾಗಿದ್ದದನ್ನು ಗಮನಿಸಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.