ರಾಜ್ಯ ಸರ್ಕಾರಿ ಕಚೇರಿಗಳೂ ಅಷ್ಟೇನು ಸ್ವಚ್ಛವಾಗಿಲ್ಲ!

ಭಾರತವನ್ನು ಸ್ವಚ್ಛತಾ ರಾಷ್ಟ್ರವಾಗಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಒಂದೆಡೆ ನಾಗರೀಕ ಪ್ರದೇಶಗಳನ್ನು ಸ್ವಚ್ಛವಾಗಿಡಲು...
ನೃಪತುಂಗ ರಸ್ತೆಯಲ್ಲಿರುವ ಪಿಡಬ್ಲ್ಯೂ ಕಚೇರಿ ಆವರಣದಲ್ಲಿ ಬಿದ್ದಿರುವ ಕಸ
ನೃಪತುಂಗ ರಸ್ತೆಯಲ್ಲಿರುವ ಪಿಡಬ್ಲ್ಯೂ ಕಚೇರಿ ಆವರಣದಲ್ಲಿ ಬಿದ್ದಿರುವ ಕಸ

ಬೆಂಗಳೂರು: ಭಾರತವನ್ನು ಸ್ವಚ್ಛತಾ ರಾಷ್ಟ್ರವಾಗಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಒಂದೆಡೆ ನಾಗರೀಕ ಪ್ರದೇಶಗಳನ್ನು ಸ್ವಚ್ಛವಾಗಿಡಲು ಕೇಂದ್ರ ಸರ್ಕಾರ ಸಾಕಷ್ಟು ಅಭಿಯಾನಗಳನ್ನು ಕೈಗೊಳ್ಳುತ್ತಿದ್ದರೆ, ಇತ್ತ ಈ ಕಾರ್ಯಗಳನ್ನು ಪ್ರಗತಿಗೆ ತರುವ ಸರ್ಕಾರಿ ಕಚೇರಿಗಳೇ ಗಬ್ಬು ನಾರುತ್ತಿರುವ ದುಸ್ಥಿತಿ ರಾಜ್ಯದಲ್ಲಿದೆ.

ಎರಡು ದಿನಗಳ ಹಿಂದಷ್ಟೇ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಸ್ವಚ್ಛ ಕಚೇರಿ ಯೋಜನೆಗೆ ಚಾಲನೆ ನೀಡಿದ್ದರು. ಈ ಬೆನ್ನಲ್ಲೇ ಸರ್ಕಾರಿ ಕಚೇರಿಗಳ ವಾಸ್ತವಿಕತೆಯನ್ನು ಪರಿಶೀಲನೆ ನಡೆಸಿದಾಗ ನಗರದ ಕಚೇರಿಗಳಲ್ಲಿರುವ ಸ್ವಚ್ಛತೆಯ ನೈಜ ಚಿತ್ರಣ ಇದೀಗ ಬೆಳಕಿಗೆ ಬಂದಿದೆ.

ರಾಜ್ಯ ರಾಜಧಾನಿಯಲ್ಲಿರುವ ಸರ್ಕಾರಿ ಕಚೇರಿಗಳನ್ನು ಪರಿಶೀಲನೆ ನಡೆಸಿದಾಗ ಕಚೇರಿಗಳಲ್ಲಿ ಧೂಳು ತುಂಬಿದ  ಹಳೆಯ ಕಡತಗಳು ಹಾಗೂ ಹಾಳಾದ ಪೀಠೋಪಕರಣಗಳು, ಗಬ್ಬು ನಾರುತ್ತಿರುವ ಶೌಚಾಲಗಳು ಕಂಡು ಬಂದಿದೆ.

ವಿಧಾನಸೌಧದ ಕಚೇರಿಗಳೂ ಕೂಡ ಸ್ವಚ್ಛತೆಯಲ್ಲಿ ಹಿಂದಿದ್ದು, ಕಟ್ಟಡದಲ್ಲಿ ಸಂಗ್ರಹಿಸಿದ ಕಸವನ್ನು ದ್ವಾರದ ಬಳಿಯೇ ಎಸೆಯಲಾಗುತ್ತಿದೆ. ಹೊರಗಿನಿಂದ ಬಂದವರಿಗೆ ಈ ಕಸ ಕಾಣುವುದಿಲ್ಲ ಆದರೂ ದ್ವಾರದ ಬಾಗಿಲ ಬಳಿಯೇ ಈ ಕಸವನ್ನು ಸಂಗ್ರಹಿಸಲಾಗುತ್ತಿದೆ.  ಕಸವನ್ನು ಕಟ್ಟಡದ ಹಿಂಬದಿಯಲ್ಲಿ ಸಂಗ್ರಹಿಸಿ ನಂತರ ಇದನ್ನು ಕೊಂಡೊಯ್ಯಲಾಗುತ್ತದೆ ಎಂದು ಭದ್ರತಾ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ನೃಪತುಂಗ ರಸ್ತೆಯಲ್ಲಿರುವ ಪಿಡಬ್ಲ್ಯೂ ಕಚೇರಿಯಲ್ಲಿಯೂ ಇಂತಹದ್ದೇ ಕಥೆಯಾಗಿದೆ. ಇಲ್ಲಿ ಕೆಲ ಹಳೆಯ ಕಚೇರಿಗಳನ್ನು ನವೀಕರಣ ಮಾಡಲಾಗುತ್ತಿದ್ದು, ಹಾಳಾದ ಪೀಠೋಪಕರಣಗಳು, ಇಟ್ಟಿಗೆಗಳು ಹಾಗೂ ಸಿಮೆಂಟ್ ಬ್ಯಾಗ್ ಗಳನ್ನು ಕಟ್ಟಡ ಮುಂಭಾಗದಲ್ಲೇ ಬಿಸಾಡಲಾಗುತ್ತಿದೆ. ಕಚೇರಿ ಪಕ್ಕದಲ್ಲೇ ಉದ್ಯಾನವಿದ್ದು, ಇದು ಉದ್ಯಾನವನದ ಅಂದವನ್ನು ಹಾಳು ಮಾಡುತ್ತಿದೆ ಎಂದು ಕೃಷ್ಣ ಭಾಗ್ಯ ಜಲ ನಿಗಮದ ಕೆಲಸಗಾರ ಮಹೇಶ್ (ಹೆಸರು ಬದಲಿಸಲಾಗಿದೆ) ಎಂಬುವವರು ಹೇಳಿಕೊಂಡಿದ್ದಾರೆ.

ಕಚೇರಿಯಲ್ಲಿ ಸ್ವಚ್ಛತೆ ತೀರಾ ಹಿಂದಿದ್ದು, ಶೌಚಾಲಗಳು ಗಬ್ಬು ನಾರುತ್ತಿರುತ್ತದೆ. ಸ್ವಚ್ಛ ಮಾಡುವುದಕ್ಕೂ ಇಲ್ಲಿ ಯಾರೂ ಕೆಲಸಗಾರರಿಲ್ಲ. ಪರಿಚಾರಕರೇ ಸ್ವಚ್ಛತೆಯನ್ನು ಮಾಡುತ್ತಿರುತ್ತಾರೆಂದು ಮಹೇಶ್ (ಹೆಸರು ಬದಲಿಸಲಾಗಿದೆ) ಹೇಳಿದ್ದಾರೆ.

ಇದರಂತೆ ವಿಶ್ವೇಶ್ವರಯ್ಯ ಗೋಪುರದಲ್ಲಿಯೂ ಹಾಳಾದ ಹಳೆಯ ಪೀಠೋಪಕರಣಗಳದ್ದೇ ಕಾರುಬಾರಾಗಿದ್ದು, ಕಚೇರಿಗಳನ್ನು ಹುಡುಕಿಕೊಂಡು ಹೋಗುವ ಜನರಿಗೆ ಈ ಪೀಠೋಪಕರಗಳಿಂದ ಬೋರ್ಡ್ ಗಳನ್ನು ನೋಡಲು ತೊಂದರೆಯಾಗುತ್ತಿದೆ ಎಂದು ಕಚೇರಿ ಹುಡುಕಿ ಬಂದ ಮೊಹಮ್ಮದ್ ಶಕೀಲ್ ಎಂಬುವವರು ಹೇಳಿದ್ದಾರೆ.
    
ಕಳೆದೆರಡು ದಿನಗಳ ಹಿಂದಷ್ಟೇ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು 15 ದಿನಗಳ ಸ್ವಚ್ಛ ಕಚೇರಿ ಯೋಜನೆಗೆ ಯೋಜನೆ ನೀಡಿದ್ದರು. ನಿರ್ಮಾಣ್ ಭವನದಲ್ಲಿ ಬೇವಿನ ಸಸಿ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2014ರ ಅಕ್ಟೋಬರ್ ತಿಂಗಳಿನಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಭಿಯಾನಕ್ಕೆ ಅಕ್ಟೋಬರ್ 2, 2019ರಂದು ಗಡುವನ್ನು ನೀಡಿದ್ದಾರೆ. ಸ್ವಚ್ಛತೆಯಲ್ಲಿ ಹೆಚ್ಚಿನ ವ್ಯಾಪ್ತಿಯಲ್ಲಿ ಸುಧಾರಣೆ ಕಂಡುಬಂದಿದ್ದು, ಗಣನೀಯ ಸುಧಾರಣೆಗೆ ಅವಕಾಶಗಳಿವೆ ಎಂದು ಹೇಳಿದ್ದರು. ಅಲ್ಲದೆ, ಒಟ್ಟು ನೈರ್ಮಲ್ಯವನ್ನು ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳುವಂತೆ ಸಚಿವಾಲಯದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com