ಅಪರಾಧ
ರಾಜ್ಯ
ಬೆಂಗಳೂರು: ವಿವಾಹಿತೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ಪ್ರಿಯಕರ
ಬೈಯಪ್ಪನಹಳ್ಳಿಯ ಸಿದ್ದಗುಂಟೆ ಪಾಳ್ಯದ ರಾಜ್ ಕುಮಾರ್ ಸರ್ಕಲ್ ಬಳಿ ಯುವಕನೊಬ್ಬ ವಿವಾಹಿತೆಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ...
ಬೆಂಗಳೂರು: ಬೈಯಪ್ಪನಹಳ್ಳಿಯ ಸಿದ್ದಗುಂಟೆ ಪಾಳ್ಯದ ರಾಜ್ ಕುಮಾರ್ ಸರ್ಕಲ್ ಬಳಿ ಯುವಕನೊಬ್ಬ ವಿವಾಹಿತೆಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ತಮಿಳುನಾಡು ಮೂಲದ 30 ವರ್ಷದ ಚಿತ್ರಾ ಎನ್ನುವವರು ಹತ್ಯೆಗೀಡಾಗಿದ್ದು, ಆರೋಪಿ 19 ವರ್ಷದ ಅಜಿತ್ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ.
ಚಿತ್ರಾಳ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಅಜಿತ್ ಬಳಿಕ ಬೈಯಪ್ಪನಹಳ್ಳಿ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


