ಕೇವಲ ನಾಲ್ಕೇ ತಿಂಗಳಲ್ಲಿ ಬೆಂಗಳೂರಿನಲ್ಲಿ 20 ಮಂದಿಯ ಬಲಿ ಪಡೆದ ಬಿಎಂಟಿಸಿ!

ಅಪಘಾತದಂತಹ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ನಗರ ಪೊಲೀಸರು ಎಷ್ಟೇ ಪ್ರಯತ್ನ ಪಡುತ್ತಿದ್ದರೂ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಕೆಲವು ತಿಂಗಳಿನಿಂದಲೂ...
ಬಿಎಂಟಿಸಿ (ಸಂಗ್ರಹ ಚಿತ್ರ)
ಬಿಎಂಟಿಸಿ (ಸಂಗ್ರಹ ಚಿತ್ರ)

ಬೆಂಗಳೂರು: ಅಪಘಾತದಂತಹ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ನಗರ ಪೊಲೀಸರು ಎಷ್ಟೇ ಪ್ರಯತ್ನ ಪಡುತ್ತಿದ್ದರೂ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಕೆಲವು ತಿಂಗಳಿನಿಂದಲೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಂತೂ ನಾಗರೀಕರ ಪಾಲಿಗೆ ಯಮಪಾಷದಂತಾಗಿದೆ.

ಕಿಲ್ಲರ್ ಬಿಎಂಟಿಸಿಗೆ ಕೇವಲ 4 ತಿಂಗಳಿನಲ್ಲಿ 20 ಮಂದಿ ಬಲಿಯಾಗಿದ್ದಾರೆ. ಈ ವರ್ಷದ ಆರಂಭಿಕ ತಿಂಗಳಾದ ಜನವರಿಯಲ್ಲಿ ಬಿಎಂಟಿಸಿಯಿಂದಲೇ 81 ಅಪಘಾತಗಳಾಗಿರುವುದು ದಾಖಲಾಗಿದೆ.

ಸಂಚಾರಿ ಪೊಲೀಸರ ವರದಿಗಳ ಪ್ರಕಾರ 2015ರಲ್ಲಿ ಬಿಎಂಟಿಸಿಯಿಂದಾದ ಅಪಘಾತದಲ್ಲಿ 50 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 2014ರಲ್ಲಿ 67 ಮಂದಿ ಸಾವಿಗೀಡಾಗಿದ್ದಾರೆ. 2013ರಲ್ಲೂ 279 ಅಪಘಾತವಾಗಿದ್ದು, ಇದರಲ್ಲಿ 66 ಮಂದಿ ಸಾವನ್ನಪ್ಪಿದ್ದರು ಎಂದು ಹೇಳಿಕೊಂಡಿದೆ.

ಯಾರದು ತಪ್ಪು...?
ಎಲ್ಲಾ ಅಪಘಾತಗಳು ವಾಹನ ಚಾಲಕರಿಂದಲೇ ಆಗುವುದಿಲ್ಲ. ಹಾಗೆಂದು ವಾಹನ ಚಾಲಕರು ತಪ್ಪು ಮಾಡುವುದಿಲ್ಲ ಎಂದಲ್ಲ. ಸಾಕಷ್ಟು ಅಪಘಾತಗಳು ಚಾಲಕ ನಿರ್ಲಕ್ಷ್ಯದಿಂದಾಗುತ್ತದೆ. ಕೆಲವೊಮ್ಮೆ ಸಾರ್ವಜನಿಕರೂ ಕೂಡ ತಪ್ಪು ಮಾಡುತ್ತಾರೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಸಂಚಾರಿ ಪೊಲೀಸ್ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಘಾತದ ಬಳಿಕ ಕೇವಲ ಚಾಲಕರನ್ನು ನಿಂದಿಸಲಾಗುತ್ತದೆ. ಚಾಲಕರನ್ನು ನಿಂದಿಸಿದ ಕೂಡಲೇ ಸಮಸ್ಯೆ ಬಗೆಹರಿಯಲ್ಲ. ಚಾಲಕರಿಗೆ ಸಾಕಷ್ಟು ಒತ್ತಡಗಳಿರುತ್ತದೆ. ಚಾಲಕರಿಗೆ ಇಂತಿಷ್ಟು ಸಮಯದಲ್ಲಿ ಇಷ್ಟು ಪ್ರಯಾಣ ಮಾಡಲೇಬೇಕೆಂದಿರುತ್ತದೆ. ನಗರದಲ್ಲಿ ಉಂಟಾಗುವ ಟ್ರಾಫಿಕ್ ಗಳ ಸಂದರ್ಭದಲ್ಲಿ ಹಾಗೂ ರಸ್ತೆಗಳ ದುರಸ್ತಿ ಸಂದರ್ಭದಲ್ಲಿ ಇದನ್ನು ಪಾಲಿಸುವುದು ಕಷ್ಟವಾಗುತ್ತದೆ ಎಂದು ಸಂಚಾರ ತಜ್ಞ ಎಂ.ಎನ್. ಶ್ರೀಹರಿ ಅವರ ಹೇಳಿದ್ದಾರೆ.

ಇನ್ನು ಬಸ್ ನಿಲ್ದಾಣಗಳನ್ನು ವೈಜ್ಞಾನಿಕವಾಗಿ ಯೋಜನೆ ಮಾಡಲಾಗಿಲ್ಲ. ಸಾರ್ವಜನಿಕರೂ ಕೂಡ ನಿಲ್ದಾಣದಲ್ಲಿ ನಿಲ್ಲದೇ ರಸ್ತೆ ಮಧ್ಯೆ ಬಂದು ನಿಂತಿರುತ್ತಾರೆ. ಹೀಗಾಗಿ ಸಾರ್ವಜನಿಕರು ಸರಿಯಾದ ರೀತಿಯಲ್ಲಿ ನಿಯಮ ಪಾಲಿಸಲು ಹಾಗೂ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ರೀತಿಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com