ಕಾರವಾರ: ಯುವತಿಯೊಬ್ಬರು ಸೆಲ್ಫಿ ತೆಗೆದೆಕೊಳ್ಳುವಾಗ ಕಾಲು ಜಾರಿ ಸಮುದ್ರದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಲೈಟ್ ಹೌಸ್ ಬಳಿ ನಡೆದಿದೆ.
ರಾಜಸ್ಥಾನದ ಜೋಧಪುರ ಮೂಲದ ರಮಿತಾ ಮೆಹ್ತಾ (22) ಮೃತ ದುರ್ಧೈವಿ ಯುವತಿ.
ಐದು ಮಂದಿ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಬಂದಿದ್ದ ವೇಳೆ ರಮಿತಾ ಲೈಟ್ ಹೌಸ್ ಬಳಿಯ ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆಯುವಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕೂಡಲೇ ಈಜುಗಾರರು ಸಮುದ್ರಕ್ಕೆ ಜಿಗಿದು ಯುವತಿ ದೇಹವನ್ನು ಹೊರತೆಗೆದಿದ್ದಾರೆ.
ಈ ಸಂಬಂಧ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.