ಆತ್ಮಹತ್ಯೆ ಯತ್ನದ ನಂತರ ಈ ವಿದ್ಯಾರ್ಥಿನಿ ಮರುಮೌಲ್ಯಮಾಪನದಲ್ಲಿ ಗಳಿಸಿದ್ದು ನೂರಕ್ಕೆ ನೂರು ಅಂಕ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತೆಂದು ಆತ್ಮಹತ್ಯೆಗೆ ಯತ್ನಿಸಿ ವಿಫಲಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಮರು ಮೌಲ್ಯ ಮಾಪನದಲ್ಲಿ ನೂರಕ್ಕೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತೆಂದು ಆತ್ಮಹತ್ಯೆಗೆ ಯತ್ನಿಸಿ ವಿಫಲಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಮರು ಮೌಲ್ಯ ಮಾಪನದಲ್ಲಿ  ನೂರಕ್ಕೆ ನೂರು ಅಂಕ ಗಳಿಸಿದ್ದಾಳೆ.

ನೆಲಮಂಗಲದ ಖಾಸಗಿ ಶಾಲೆಯ ವಿದ್ಯಾರ್ಥಿನಿ ಧನ್ಯಾಶ್ರೀಗೆ ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯಲ್ಲಿ 60 ಅಂಕ ಬಂದಿತ್ತು. ಓದಿನಲ್ಲಿ ಶಾಲೆಗೆ ಮೊದಲಾಗಿದ್ದ ಧನ್ಯಶ್ರೀ ಯಾವಾಗಲು ಡಿಸ್ಟಿಂಕ್ಷನ್ ಪಡೆಯುತ್ತಿದ್ದಳು. ಹೀಗಾಗಿ ಕಡಿಮೆ ಅಂಕ ಬಂದಿದಕ್ಕೆ ನೊಂದು ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಳು.

ಕೂಡಲೇ ಧನ್ಯಶ್ರೀ ತಾಯಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಆಕೆ ಬದುಕುಳಿದಳು. ನಂತರ ಉತ್ತರ ಪ್ರತಿಕೆಯ ಜೆರಾಕ್ಸ್ ಪ್ರತಿಯನ್ನು ತೆಗೆದು ಪರಿಶೀಲಿಸಿದಾಗ ಹಿಂದಿಯಲ್ಲಿ ಆಕೆಗೆ ನೂರಕ್ಕ ನೂರು ಅಂಕ ಬಂದಿತ್ತು. ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಧನ್ಯಾಶ್ರೀ ತಾಯಿ ಮನವಿ ಮಾಡಿದ್ದಾರೆ.

ಇನ್ನೂ ತಾನು ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿದ್ದರಿಂದ ತಮ್ಮ ಮಗಳು ಬದುಕುಳಿದಳು ಎಂದು ಧನ್ಯಾಶ್ರೀ ತಾಯಿ ಹೇಳಿದ್ದಾರೆ. ಇನ್ನೂ ಧನ್ಯಾಶ್ರೀ ಅಂಕಪಟ್ಟಿಯಲ್ಲಿ ಹಿಂದಿಯಲ್ಲಿ ಆಕೆ ಪಡೆದಿರುವ ಅಂಕಗಳನ್ನು ಸೇರಿಸಲಾಗುವುದು ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ಮೌಲ್ಯಮಾಪನ ನಡೆಸಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com