ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜೂನ್ 4ಕ್ಕೆ ರಾಜ್ಯ ಪೊಲೀಸರ ಸಾಮೂಹಿಕ ರಜೆ ಸಾಧ್ಯತೆ

ಕೆಲಸದಲ್ಲಿ ಒತ್ತಡ, ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜೂನ್ 4ರಂದು ಸಾಮೂಹಿಕ ರಜೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಕೆಲಸದಲ್ಲಿ ಒತ್ತಡ, ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜೂನ್ 4ರಂದು ಸಾಮೂಹಿಕ ರಜೆ ಹಾಕುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. 
ಪೊಲೀಸ್ ಪೇದೆಗಳ ಹೋರಾಟಕ್ಕೆ ನಿವೃತ್ತಿ ಪೊಲೀಸ್ ಅಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಇಲಾಖೆಯಲ್ಲಿ ಪೇದೆಗಳ ಪರಿಸ್ಥಿತಿ ಹದಗೆಟ್ಟಿದೆ. ಕರ್ನಾಟಕದಲ್ಲಿ ಕೆಲವು ಹಿರಿಯ ಅಧಿಕಾರಿಗಳು ಪೇದೆಗಳನ್ನು ತಮ್ಮ ಸೇವಕರಂತೆ ನಡೆಸಿಕೊಳ್ಳುತ್ತಾರೆ. ಇಂತಹ ಪದ್ಧತಿ ನಿಲ್ಲಬೇಕು. ಅಲ್ಲದೇ, ಪೇದೆಗಳಿಗೂ ಸಮಯವನ್ನು ನಿಗದಿ ಪಡಿಸಬೇಕು ಎಂದು ಎಂದು ನಿವೃತ್ತ ಡಿಜಿ ಐಜಿಪಿ ಸಿ ದಿನಕರನ್ ಆಗ್ರಹಿಸಿದ್ದಾರೆ.
ವಾರದ ರಜೆ ಇಲ್ಲದೇ ಪೇದೆಗಳು ಕೆಲಸ ಮಾಡುತ್ತಾರೆ. ಹಬ್ಬಗಳಿಗೂ ರಜೆ ಸಿಗುವುದಿಲ್ಲ. ಅಲ್ಲದೇ, ನಿಗದಿಗಿಂತ ಹೆಚ್ಚು ಸಮಯ ಕೆಲಸ ಮಾಡಬೇಕಿದೆ. ಮನೆಯಲ್ಲಿ ಹೆಂಡತಿ ಮಕ್ಕಳ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪೇದೆಗಳನ್ನು ನೇಮಕ ಮಾಡಿಕೊಂಡರೆ, ಪೇದೆಗಳ ಮೇಲೆ ಒತ್ತಡ ಬರುವುದಿಲ್ಲ. ಇಲಾಖೆಯಲ್ಲಿ ಸಾಕಷ್ಟು ಪೇದೆಗಳ ಹುದ್ದೆಗಳು ಖಾಲಿ. ಸರಿಯಾಗಿ ಭರ್ತಿ ಮಾಡಿದರೆ, ಸಮಸ್ಯೆ ಬಗೆಹರಿಯುತ್ತದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ಎಸ್ ಟಿ ರಮೇಶ್ ತಿಳಿಸಿದ್ದಾರೆ. 
ಪ್ರತಿ ದಿನ 11ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತೇವೆ. ಕೆಲಸಕ್ಕೆ ಸೇರಿದ ಮೇಲೆ ನಿದ್ದೆಯನ್ನು ಮರೆತಿದ್ದೇವೆ. ಇದರಿಂದಾಗಿ ಹಲವು ರೋಗಗಳು ಬಂದಿವೆ. ಮಕ್ಕಳ ಶಿಕ್ಷಣದ ಕಡೆಗೂ ಗಮನ ನೀಡಲಾಗುತ್ತಿಲ್ಲ. ಜನರ ಸೇವೆ ಮಾಡಲು ಕೆಲಸಕ್ಕೆ ಸೇರಿದ್ದೇವೆ. ಆದರೆ ಇಲ್ಲಿನ ಪರಿಸ್ಥಿತಿ ಬೇರೆಯೇ ಇದೆ. ರಜೆ ಕೇಳಿದರೂ ಹಿರಿಯ ಅಧಿಕಾರಿಗಳು ರಜೆ ನೀಡುವುದಿಲ್ಲ. ವಾರದಲ್ಲಿ ಒಂದು ದಿನವೂ ರಜೆ ಸಿಗುವುದಿಲ್ಲ. ಕೆಲಸದಲ್ಲಿ ಒತ್ತಡಗಳು ಹೆಚ್ಚಾಗಿವೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ಅನಿರ್ವಾಯವಾಗಿದೆ ಎಂದು ಕೆಲವು ಪೇದೆಗಳು ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com