ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ 3ನೇ ಪ್ರವೇಶ ದ್ವಾರ

ಹೆಚ್ಚುತ್ತಿರುವ ಪ್ರಯಾಣಿಕರು ಮತ್ತು ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 3ನೇ ..
ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ
ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ

ಬೆಂಗಳೂರು: ಹೆಚ್ಚುತ್ತಿರುವ ಪ್ರಯಾಣಿಕರು ಮತ್ತು ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಬೆಂಗಳೂರಿನ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 3ನೇ ಪ್ರವೇಶ ದ್ವಾರವನ್ನು ನಿರ್ಮಿಸಲಾಗುತ್ತಿದೆ.

ಗುಬ್ಬಿ ತೊಂಡಪ್ಪ ರಸ್ತೆಯ (ಸುಬೇದಾರ್ ಛತ್ರಂ) ಅಂದರೆ ಶಾಂತಲಾ ಸಿಲ್ಕ್ ಹೌಸ್ ಸಮೀಪದಲ್ಲೇ ಈ ಪ್ರವೇಶ ದ್ವಾರ ಬರಲಿದೆ. ಸುಮಾರು 1.3 ಎಕರೆ ಜಾಗದಲ್ಲಿ ಈ ಪ್ರವೇಶ ದ್ವಾರ ನಿರ್ಮಾಣ ವಾಗಲಿದ್ದು, ದ್ವಿಚಕ್ರ ವಾಹನ ಹಾಗೂ ಕಾರು ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿದಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಸುಮಾರು 2ಲಕ್ಷ ಪ್ರಯಾಣಿಕರು ಬರುತ್ತಾರೆ. ಹೀಗಾಗಿ ಪ್ರಸ್ತುತ ಇರುವ ಎರಡು ಪ್ರವೇಶ ದ್ವಾರದಲ್ಲಿ ಜನ ಜಂಗುಳಿ ಹೆಚ್ಚಿದ್ದು, ಪ್ರಯಾಣಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಅದರಲ್ಲೂ ಬೆಳಗ್ಗೆ 6ರಿಂದ9 ಮತ್ತು ಸಂಜೆ 6 ರಿಂದ 9 ರ ಸಮಯದಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ 3ನೇ ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ ಎಂದು ರೈಲ್ವೆ ಪ್ರಾದೇಶಿಕ ವಿಭಾಗದ ಮ್ಯಾನೇಜರ್ ಲಕ್ಷ್ಣಣ ಸಿಂಗ್ ಹೇಳಿದ್ದಾರೆ.

ಕಳೆದ 25-30 ವರ್ಷಗಳಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರತಿದಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸುಮಾರು 107 ರೈಲುಗಳು ಸಂಚರಿಸುತ್ತವೆ. ಈ ಹೊಸ ಪ್ರವೇಶ ದ್ವಾರದ ಪೊರ್ಟಿಕೊದಲ್ಲಿ ನಿಗದಿಪಡಿಸದ ಟಿಕೆಟ್ ಹಾಗೂ ಫ್ಲಾಟ್ ಫಾರಂ ಟಿಕೆಟ್ ನೀಡುವ ಕೌಂಟರ್ ಕೂಡ ಸ್ಥಾಪಿಸಲಾಗುತ್ತದೆ.

ಕಳೆದ ಮಾರ್ಚ್ ನಲ್ಲೇ ಪ್ರವೇಶ ದ್ವಾರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಗ್ರಾನೇಟ್ ಹಾಗೂ ಲೆವೆಲಿಂಗ್ ಕಾರ್ಯ ಸಂಪೂರ್ಣವಾಗಿದೆ.ಆಗಸ್ಟ್ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com