ಬೆಂಗಳೂರು: ಬರಿದಾಗುತ್ತಿರುವ ಜಲಾಶಯ ಹಾಗೂ ಈಶಾನ್ಯ ಮಾರುತಗಳ ದುರ್ಬಲತೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಲ್ಲಿ ಬರದ ಕಾರ್ಮೋಡ ಆವರಿಸುತ್ತಿದೆ.
ಮಳೆ ಅಭಾವ ಹೀಗೆ ಮುಂದುವರಿದರೇ ಬೇಸಿಗೆಯಲ್ಲಿ ನೀರಿನ ಕೊರತೆ ಬೆಂಗಳೂರಿಗರನ್ನು ಇನ್ನಿಲ್ಲದಂತೆ ಕಾಡಲಿದೆ.
ಬುಧವಾರದ ಮಾಹಿತಿಯ ಪ್ರಕಾರ, ದಕ್ಷಿಣ ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳ ನೀರಿನ ಮಟ್ಟ 19.33 ಟಿಎಂಸಿ ಅಡಿ ಮಾತ್ರ ಇದೆ. ಕಾವೇರಿ ನೀರಾವರಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಚಿಕ್ಕರಾಯಪ್ಪ ಅವರ ಪ್ರಕಾರ, ಚಾಮರಾಜನಗರ ದಂತಹ ಸ್ಥಳಗಳಲ್ಲಿ ಕೊಳವೆ ಬಾವಿಗಳು ಇದ್ದಕ್ಕಿದ್ದಂತೆ ಒಣಗಿ ಹೋಗಿವೆ. ಹೀಗಾಗಿ ಭೀಕರ ಬೇಸಿಗೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜ್ಯಾದ್ಯಂತ ತಾಪಾಮಾನ ಸಹಜ ಸ್ಥಿತಿಗಿಂತ ಅಧಿಕವಾಗಿದೆ,
ಈಗ ಜಲಾಶಯದಲ್ಲಿ ಪ್ರಸಕ್ತ ಇರುವ ನೀರಲ್ಲಿ 9 ಟಿಎಂಸಿ ನೀರು ಬೆಂಗಳೂರು ನಗರಕ್ಕೆ ಅಗತ್ಯವಿದೆ. ವಾರ್ಷಕವಾಗಿ ಬೆಂಗಳೂರಿಗೆ 18 ಟಿಎಂಸಿ ನೀರಿನ ಅಗತ್ಯವಿದೆ ಎಂದು ಬೆಂಗಳೂರು ಜಲ ಮಂಡಳಿ ತಿಳಿಸಿದೆ.
ಕಬಿನಿ ಮತ್ತು ಕೃಷ್ಣರಾಜ ಸಾಗರ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡದಿರಲು ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ಸ್ವಲ್ಪ ಮಟ್ಟಿಗೆ ಸಹಾಯವಾಗಿದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಎಲ್ಲಾ ಪ್ರದೇಶಗಳು ಸಮಾನವಾಗಿ ಬರ ಪರಿಸ್ಥಿತಿ ಅನುಭವಿಸುತ್ತಿವೆ. ಉತ್ತರ ಕರ್ನಾಟಕದಲ್ಲಿರುವ ಮಲಪ್ರಭಾ ಸೇರಿದಂತೆ ಎಲ್ಲಾ ಪ್ರಮುಖ ಜಲಾಶಯಗಳು ಅಧಿಕ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿವೆ. ಭದ್ರ ಮತ್ತು ತುಂಗಾ ಜಲಾಶಯದಲ್ಲಿ 25.98 ಟಿಎಂಸಿ ಅಡಿ ಇದೆ. ಉತ್ತರ ಕರ್ನಾಟಕದ ಎಲ್ಲಾ ಜಲಾಶಗಳಳ್ಲಿ ಒಟ್ಟು 224.13 ಟಿಎಂಸಿ ನೀರು ಇದೆ,
ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆ ಅತಿ ಹೆಚ್ಚು ಬರ ಪೀಡಿತ ಜಿಲ್ಲೆಯಾಗಿದೆ. ಮಳೆಯಿಲ್ಲದೇ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆ ನಾಶವಾಗಿದೆ, ಕೊಳವೆ ಬಾವಿಗಳು ಏಕಾಏಕಿ ನಿಂತು ಹೋಗಿವೆ, ನೀರಿನ ಬೇಡಿಕೆ ಹೆಚ್ಚಿದ್ದು ಈ ಹಿನ್ನೆಲೆಯಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ.
Advertisement