ಉಕ್ಕಿನ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾದರೆ ನಮ್ಮ ಅಭ್ಯಂತರವಿಲ್ಲ: ಕೆಜೆ ಜಾರ್ಜ್

ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕೇಳಿರುವ ಸ್ಪಷ್ಟನೆಗೆ ಶೀಘ್ರದಲ್ಲಿಯೇ ಸ್ಪಷ್ಟೀಕರಣ ಸಲ್ಲಿಸಲಾಗುವುದು ಎಂದು...
ಕೆಜೆ ಜಾರ್ಜ್
ಕೆಜೆ ಜಾರ್ಜ್

ಬೆಂಗಳೂರು: ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕೇಳಿರುವ ಸ್ಪಷ್ಟನೆಗೆ ಶೀಘ್ರದಲ್ಲಿಯೇ ಸ್ಪಷ್ಟೀಕರಣ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.

ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ 1,900 ಕೋಟಿ ವೆಚ್ಚದಲ್ಲಿ 6.27 ಕಿ.ಮೀ ಉದ್ದದ ಷಟ್ಪಥದ ಉಕ್ಕಿನ ಸೇತುವೆ ನಿರ್ಮಿಸಲು ಉದ್ದೇಶಿಸಿದ್ದು ಬಿಜೆಪಿ ಹೇಳಿದಂತೆ ಕೇಂದ್ರ ಸರ್ಕಾರ 1,350 ಕೋಟಿ ವೆಚ್ಚದಲ್ಲಿ ಈ ಯೋಜನೆ ನಿರ್ಮಾಣಕ್ಕೆ ಮುಂದಾದರೆ ನಮ್ಮ ಅಭ್ಯಂತರ ಏನು ಇಲ್ಲ ಎಂದು ಜಾರ್ಜ್ ಹೇಳಿದ್ದಾರೆ.

ಸರ್ಕಾರ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವಿವರವಾದ ಯೋಜನಾ ವರದಿ(ಡಿಪಿಆರ್)ಯನ್ವಯ ಸೇತುವೆ ನಿರ್ಮಾಣ ಮಾಡಲಾಗುವುದು. ನಮ್ಮ ಉದ್ದೇಶ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದೇ ಆಗಿದೆ ಎಂದರು.

ಇದೇ ವೇಳೆ ಉಕ್ಕಿನ ಮೇಲ್ಸೇತುವೆ ಯೋಜನೆ ವಿರುದ್ಧ ಹೋರಾಟ ನಡೆಸುತ್ತಿರುವವರ ವಿರುದ್ಧ ಹರಿಹಾಯ್ದ ಕೆಜೆ ಜಾರ್ಜ್, ಕೆಲವರು ಉಕ್ಕಿನ ಸೇತುವೆ ಯೋಜನೆಯನ್ನು ವಿರೋಧಿಸುವ ಜೊತೆಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಉಕ್ಕಿನ ಸೇತುವೆ ನಿಲ್ಲಿಸುವಂತೆ ಹೈಕೋರ್ಟ್ ಗೆ ಹೋಗಿದ್ದೂ ನ್ಯಾಯಾಲಯ ಸರ್ಕಾರದ ಪರವಾಗಿ ತೀರ್ಪು ನೀಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com