ನೀರಿಗೆ ತತ್ವಾರ: ಬೆಂಗಳೂರಿಗೆ ನೀರು ಹರಿಸುವಿಕೆಯಲ್ಲಿ 65 ದಶಲಕ್ಷ ಲೀಟರ್ ಕಡಿತ

ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ತನ್ನ ನಿಗದಿತ ದಿನಕ್ಕೆ ಸಾವಿರದ 400...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ತನ್ನ ನಿಗದಿತ ದಿನಕ್ಕೆ ಸಾವಿರದ 400 ದಶಲಕ್ಷ ಲೀಟರ್  ಕಾವೇರಿ ನೀರಿಗೆ ಬದಲಾಗಿ ಅಕ್ಟೋಬರ್ ತಿಂಗಳಿನಿಂದ ಪ್ರತಿ ದಿನಕ್ಕೆ 60ರಿಂದ 65 ಮಿಲಿಯನ್ ಲೀಟರ್ ನೀರನ್ನು ಕಡಿಮೆ ಬಿಡುಗಡೆ ಮಾಡುತ್ತಿದೆ.
ನೀರಿನ ಕೊರತೆಯಿಂದ ಮುಂದೆ ಬೇಸಿಗೆಯಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಮತ್ತು ಕೆಲವು ನೀರು ಯೋಜನೆಗಳಿಗಾಗಿ ಕಾವೇರಿ ನೀರಿನ ಅವಶ್ಯಕತೆಯಿರುವುದರಿಂದ ಈಗಿನಿಂದಲೇ ನೀರು ಬಿಡುಗಡೆ ಮಾಡುವುದನ್ನು ಕಡಿಮೆ ಮಾಡಲಾಗಿದೆ ಎಂದು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಕೆಂಪರಾಮಯ್ಯ ತಿಳಿಸಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಮೊನ್ನೆ ದೀಪಾವಳಿ ಹಬ್ಬವನ್ನು ಹೊರತುಪಡಿಸಿ ಅಕ್ಟೋಬರ್ ತಿಂಗಳಿನಿಂದ ದಿನಕ್ಕೆ ಸಾವಿರದ 335 ಮಿಲಿಯನ್ ಲೀಟರ್ ನಿಂದ ಸಾವಿರದ 340 ಮಿಲಿಯನ್ ಲೀಟರ್ ನಷ್ಟು ಬಿಡುಗಡೆ ಮಾಡುತ್ತಿದ್ದು ನವೆಂಬರ್ ತಿಂಗಳಿನಲ್ಲಿಯೂ ಮುಂದುವರಿಯಲಿದೆ. 
ಈ ವರ್ಷ ನೈರುತ್ಯ ಮುಂಗಾರಿನಲ್ಲಿ ಶೇಕಡಾ 18ರಷ್ಟು ಕಡಿಮೆಯಾಗಿದೆ. ಈಶಾನ್ಯ ಮಾರುತ ಕೂಡ ಕ್ಷೀಣವಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ 28 ಮಿಲಿ ಮೀಟರ್ ಮಳೆಯಾಗಿದೆಯಷ್ಟೆ. ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕೃಷ್ಣರಾಜ ಸಾಗರದಲ್ಲಿ ಸಾಮರ್ಥ್ಯಕ್ಕಿಂತ 77 ಅಡಿ ನೀರಿನ ಮಟ್ಟ ಕಡಿಮೆಯಾಗಿದ್ದು 124.80 ಅಡಿಗಳಿವೆ. 
ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನು ನಂಬಿಕೊಂಡಿರುವ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈಗಿನಿಂದಲೇ ಕಡಿಮೆ ನೀರನ್ನು ಪೂರೈಸಿ ಅಗತ್ಯವಿದ್ದಾಗ ಹೆಚ್ಚು ನೀರು ಬಿಡುಗಡೆ ಮಾಡಬಹುದು ಎಂಬ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಕೆಂಪರಾಮಯ್ಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com