ಬೆಂಗಳೂರು: ಹಣವಿಲ್ಲದೇ, ಕೆಲಸವಿಲ್ಲದೇ, ದಿನಗೂಲಿ ನೌಕರರ ಪರದಾಟ

ಕೇಂದ್ರ ಸರ್ಕಾರ 500 ಹಾಗೂ ಒಂದು ಸಾವಿರ ರೂ ನೋಟು ನಿಷೇಧಗೊಳಿಸಿದ ಹಿನ್ನೆಲೆಯಲ್ಲಿ ಹಣವಿಲ್ಲದೇ ಬೆಂಗಳೂರು ನಗರದಲ್ಲಿರುವ ದಿನಗೂಲಿ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಕೇಂದ್ರ ಸರ್ಕಾರ 500 ಹಾಗೂ ಒಂದು ಸಾವಿರ ರೂ ನೋಟು ನಿಷೇಧಗೊಳಿಸಿದ ಹಿನ್ನೆಲೆಯಲ್ಲಿ  ಹಣವಿಲ್ಲದೇ ಬೆಂಗಳೂರು ನಗರದಲ್ಲಿರುವ ದಿನಗೂಲಿ ನೌಕರರು ಪರದಾಡುವಂತಾಗಿದೆ.

ಸರಿಯಾದ ಕೆಲಸವಿಲ್ಲದೇ ಜೊತೆಗೆ ಮಾಡಿದ ಕೆಲಸಕ್ಕೆ ಇನ್ನೂ ಹಣ ಸಿಗದೇ ಸಮಸ್ಯೆಗೆ ಸಿಲುಕಿದ್ದಾರೆ. ಎಲೆಕ್ಟ್ರಿಷಿಯನ್, ಪ್ಲಂಬರ್ಸ್, ಕಟ್ಟಡ ನಿರ್ಮಾಣ ಕೆಲಸಗಾರರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಇಲ್ಲಿ ಯಾವುದೇ ಬ್ಯಾಂಕ್ ಖಾತೆ ಹೊಂದಿಲ್ಲದೇ, ಸರ್ಕಾರಿ ಗುರುತಿನ ಚೀಟಿಯಿಲ್ಲದೇ ಇರುವ ಹಣವನ್ನು ಬದಲಾಯಿಸಿಕೊಳ್ಳಲು ಆಗದೇ ಕೂಲಿ ಕಾರ್ಮಿರು ಪರದಾಡುವಂತಾಗಿದೆ.

ಪ್ರತಿ ವಾರ ಕೆಲಸಗಾರರಿಗೆ ಸುಮಾರು 50 ಸಾವಿರ ರೂ ಕೂಲಿ ನೀಡಬೇಕಾಗುತ್ತದೆ. ಆದರೆ ಸರ್ಕಾರ ವಾರಕ್ಕೆ ಕೇವಲ 10 ಸಾವಿರ ರೂ ಮಾತ್ರ ಡ್ರಾ ಮಾಡಲು ಅನುಮತಿ ನೀಡಿದೆ. ಹಣ ನೀಡದಿದ್ದರೇ ಕೆಲಸಗಾರರು ಕೆಲಸ ಮಾಡಲು ಬರುವುದಿಲ್ಲ ಎಂದು ಎಟಿಎಂ ನಲ್ಲಿ  ಹಣ ಪಡೆಯಲು ಕ್ಯೂ ನಲ್ಲಿ ನಿಂತಿದ್ದ, ವಿದ್ಯಾರಣ್ಯಪುರದ ಖಾಸಗಿ ಗುತ್ತಿಗೆದಾರ ಶಿವರಾಜ್ ಎಂಬುವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ನಮ್ಮ ಬಳಿ ಬ್ಯಾಂಕ್ ಖಾತೆ ಇಲ್ಲ. ಕೇವಲ 400 ರೂ ಮಾತ್ರ ಹಣವಿದೆ, ನಾನು ಬಾಗಲಕೋಟೆಯಿಂದ ಬಂದಿದ್ದು,  ಅಲ್ಲಿ 400 ರುಪಾಯಿ ಇದ್ದರೇ ಒಂದು ವಾರ ಜೀವನ ನಡೆಸಬಹುದು ಆದರೇ ಇಲ್ಲಾ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಕಾರ್ಮಿಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com