ಬೆಂಗಳೂರಿನಲ್ಲಿ ವೈದ್ಯಕೀಯ ಕಾಲೇಜ್ ಉಪನ್ಯಾಸಕಿ ಆತ್ಮಹತ್ಯೆಗೆ ಯತ್ನ

ಹಿರಿಯ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಮುಂದೆಯೇ ತಮ್ಮನ್ನು ನಿಂದಿಸಿದರು ಎಂದು ಆರೋಪಿಸಿ ಬೆಂಗಳೂರು...
ಬಿಎಂಸಿಆರ್ ಐ
ಬಿಎಂಸಿಆರ್ ಐ
ಬೆಂಗಳೂರು: ಹಿರಿಯ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಮುಂದೆಯೇ ತಮ್ಮನ್ನು ನಿಂದಿಸಿದರು ಎಂದು ಆರೋಪಿಸಿ ಬೆಂಗಳೂರು ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ(ಬಿಎಂಸಿಆರ್ ಐ)ಯ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಬಿಎಂಸಿಆರ್ ಐಯಲ್ಲಿ ಉಪನ್ಯಾಸಕಿಯಾಗಿದ್ದ 40 ವರ್ಷದ ಡಾ.ಮಮತಾ ಅವರು ನವೆಂಬರ್ 17ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ವಿದ್ಯಾರ್ಥಿಗಳು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆತ್ಮಹತ್ಯೆಗೆ ಯತ್ನಿಸುವ ಮುನ್ನ ಡಾ. ಮಮತಾ ಅವರು ಬಿಎಂಆರ್ ಸಿಐ ನಿರ್ದೇಶಕ ಪಿ.ಕೆ.ದೇವದಾಸ್ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ಹಿರಿಯ ಪ್ರಾಧ್ಯಾಪಕಿ ಡಾ.ಹೇಮಾವತಿ ಅವರು ತಮ್ಮನ್ನು ನಿಂದಿಸಿರುವುದಾಗಿ ದೂರಿದ್ದಾರೆ. ಅಲ್ಲದೆ ಈ ಬಗ್ಗೆ ಪದೇಪದೆ ದೂರು ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಹ ಹೇಳಿದ್ದಾರೆ.
ಇನ್ನು ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ ಡಾ.ಪಿ.ಕೆ.ದೇವದಾಸ್ ಅವರು, ಹೇಮಾವತಿ ಮತ್ತು ಮಮತಾ ಇಬ್ಬರು ಉಪನ್ಯಾಸಕರಾಗಿದ್ದು, ಬಹಳ ದಿನಗಳಿಂದ ವೈಯಕ್ತಿಕ ಕಾರಣಗಳಿಗಾಗಿ ಅವರಿಬ್ಬರ ಮಧ್ಯ ಜಗಳ ನಡೆಯುತ್ತಿತ್ತು. ಮಮತಾ ಅವರು ಆತ್ಮಹತ್ಯೆಗೆ ಯತ್ನಿಸುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಇಬ್ಬರಿಗೂ ನಾವು ಆಪ್ತ ಸಮಾಲೋಚನೆ ನಡೆಸಿದ್ದೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com