ನಗ್ರೋಟಾ ಉಗ್ರರ ದಾಳಿಯಲ್ಲಿ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಹುತಾತ್ಮ

ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಮೇಜರ್ ಸೇರಿ 7 ಮಂದಿ ಹುತಾತ್ಮರಾಗಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ ಒಬ್ಬರು..
ಮೇಜರ್ ಅಕ್ಷಯ್ ಗಿರೀಶ್ ಕುಮಾರ್
ಮೇಜರ್ ಅಕ್ಷಯ್ ಗಿರೀಶ್ ಕುಮಾರ್

ಬೆಂಗಳೂರು: ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಮೇಜರ್ ಸೇರಿ 7 ಮಂದಿ ಹುತಾತ್ಮರಾಗಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ ಒಬ್ಬರು ಬೆಂಗಳೂರಿನವರಾಗಿದ್ದಾರೆ.

ಮೇಜರ್ ಅಕ್ಷಯ್ ಗಿರೀಶ್ ಕುಮಾರ್ (31) ಬೆಂಗಳೂರು ಮೂಲದವರು. ಪೊಲೀಸ್ ಯೂನಿಫಾರ್ಮ್‍ನಲ್ಲಿ ಮಂಗಳವಾರ ಮುಂಜಾನೆ 5.30ರ ಸುಮಾರಿಗೆ ಭಾರೀ ಪ್ರಮಾಣದಲ್ಲಿ ಶಸ್ತ್ರ ಸಜ್ಜಿತರಾಗಿದ್ದ ಉಗ್ರರು ನಗ್ರೋಟಾ ರೆಜಿಮೆಂಟ್ ಮೇಲೆ ದಾಳಿ ಮಾಡಿದ್ದರು.

ಅಕ್ಷಯ್ ಗಿರೀಶ್ ಕುಮಾರ್ ಜವಹರ್ ಲಾಲ್ ನೆಹರು ವಿವಿ ಪದವೀಧರ, ನಿವೃತ್ತ ಐಎಎಫ್ ಫೈಲಟ್ ಗಿರೀಶ್ ಕುಮಾರ್ ಹಾಗೂ ಮೇಘನಾ ಗಿರೀಶ್ ಅವರ ಪುತ್ರ, ನಾಲ್ಕು ವರ್ಷದ ಕೆಳಗೆ ಅಕ್ಷಯ್ ತಮ್ಮ ಸ್ನೇಹಿತೆ ಸಂಗೀತಾ ರವೀಂದ್ರನ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಮೂರು ವರ್ಷದ ಮಗಳಿದ್ದಾರೆ. ಅಕ್ಷಯ್ ಪೋಷಕರು ಹಾಗೂ ಅವರ ಸಹೋದರಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ಪೋಸ್ಟಿಂಗ್ ಆಗುವ ಮುನ್ನ ಅಕ್ಷಯ್ ಮತ್ತು ಪತ್ನಿ ಸಂಗೀತಾ  ಪುಣೆ ಮತ್ತು ಕೊಲ್ಕೊತಾದಲ್ಲಿ ನೆಲೆಸಿದ್ದರು. ನಿನ್ನೆ ದಾಳಿ ನಡೆದಾಗ ಅಕ್ಷಯ್ ಪತ್ನಿ ಹಾಗೂ ಮಗಳು ನಗ್ರೋಟಾದಲ್ಲೇ ಇದ್ದರು.

ಕೊಲೆಯಾದ ಮೇಜರ್ ಸುಶಿಲ್ ಚಿಕ್ವಾರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಅಕ್ಷಯ್ ಕುಮಾರ್ ಹರ್ಯಾಣ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com