ಸಕಲ ಸರ್ಕಾರಿ ಗೌರವದೊಂದಿಗೆ ಹುತಾತ್ಮ ಯೋಧ ಅಕ್ಷಯ್ ಅಂತ್ಯಸಂಸ್ಕಾರ

ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಅಂತ್ಯಕ್ರಿಯೆ...
ಮೇಜರ್ ಅಕ್ಷಯ್
ಮೇಜರ್ ಅಕ್ಷಯ್
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. 
ಹೆಬ್ಬಾಳ ಚಿತಾಗಾರದಲ್ಲಿ ಹುತಾತ್ಮ ಅಕ್ಷಯ್ ಅವರ ಅಂತ್ಯಸಂಸ್ಕಾರ ನೇರವೆರಿತು. ಈ ವೇಳೆ ಪತ್ನಿ ಸಂಗೀತಾ, ಅಕ್ಷಯ್ ತಂದೆ ಗಿರೀಶ್ ಕುಮಾರ್, ತಾಯಿ ಹಾಗೂ ಸೇನಾಧಿಕಾರಿಗಳು, ರಾಜ್ಯ ಸಚಿವರು ಹಾಜರಿದ್ದರು. 
ಸಾರ್ವಜನಿಕ ಅಂತಿಮ ನಮನದ ನಂತರ ಅಕ್ಷಯ್ ಅವರ ಪಾರ್ಥಿವ ಶರೀರವನ್ನು ಜೆಡೆ ಗಾರ್ಡನ್ ನಿವಾಸದಿಂದ ಹೆಬ್ಬಾಳದ ಚಿತಾಗಾರದತ್ತ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. 
ಹುತಾತ್ಮ ಯೋಧ ಅಕ್ಷಯ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಜ್ಯ ಸರ್ಕಾರ 25 ಲಕ್ಷ ರುಪಾಯಿ ಹಾಗೂ ಬಿಬಿಎಂಪಿ ಮೇಯರ್ ಪದ್ಮಾವತಿ ಅವರು 10 ಲಕ್ಷ ರುಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಇದೇ ವೇಳೆ ಪ್ರಮುಖ ಫ್ಲೇಓವರ್ ಒಂದಕ್ಕೆ ಅಕ್ಷಯ್ ಹೆಸರಿಡುವುದಾಗಿ ಮೇಯರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com