ಶಾಲಾ ವಾಹನ ಚಾಲಕರ ನಂತರ ಆ್ಯಂಬುಲೆನ್ಸ್ ಡ್ರೈವರ್ಸ್ ಬೆನ್ನುಬಿದ್ದ ಪೊಲೀಸರು

ಕುಡಿದು ಶಾಲಾ ವಾಹನ ಓಡಿಸುತ್ತಿದ್ದ ಚಾಲಕರನ್ನು ವಶಕ್ಕೆ ಪಡೆದು ಕೊಂಡ ನಂತರ ಬೆಂಗಳೂರು ನಗರ ಸಂಚಾರಿ ಪೊಲೀಸರು ಈಗ ಆ್ಯಂಬುಲೆನ್ಸ್ ಚಾಲಕರ ಹಿಂದೆ ...
ಸೀಜ್ ಮಾಡಿರುವ ಫಯೋನಿಕ್ಸ್ ಆ್ಯಂಬುಲೆನ್ಸ್
ಸೀಜ್ ಮಾಡಿರುವ ಫಯೋನಿಕ್ಸ್ ಆ್ಯಂಬುಲೆನ್ಸ್

ಬೆಂಗಳೂರು: ಕುಡಿದು ಶಾಲಾ ವಾಹನ ಓಡಿಸುತ್ತಿದ್ದ ಚಾಲಕರನ್ನು ವಶಕ್ಕೆ ಪಡೆದು ಕೊಂಡ ನಂತರ ಬೆಂಗಳೂರು ನಗರ ಸಂಚಾರಿ ಪೊಲೀಸರು ಈಗ ಆ್ಯಂಬುಲೆನ್ಸ್ ಚಾಲಕರ ಹಿಂದೆ ಬಿದ್ದಿದ್ದಾರೆ.

ರವಿಕುಮಾರ್ ಎಂಬ ಆ್ಯಂಬುಲೆನ್ಸ್ ಚಾಲಕ ಕುಡಿದು ವಾಹನ ಚಾಲನೆ ಮಾಡುತ್ತಿದ್ದಾಗ ಶನಿವಾರ ನಗರ ಸಂಚಾರಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ವಾಹನ ಫಯೋನಿಕ್ಸ್ ಎಂಬ ಆ್ಯಂಬುಲೆನ್ಸ್ ಸೇವೆಗೆ ಸೇರಿದ್ದಾಗಿದೆ. ರಾತ್ರಿ 8.45 ರ ಸಂದರ್ಭದಲ್ಲಿ  ಹೆಬ್ಬಾಳ ಬಳಿಯ ವೀರನ ಪಾಳ್ಯದಲ್ಲಿ ನಾವು ಪರೀಕ್ಷೆ ನಡೆಸುತ್ತಿದ್ದೆವು. ಈ ವೇಳೆ ಬಂದ ಆ್ಯಂಬುಲೆನ್ಸ್ ನಲ್ಲಿದ್ದ ಚಾಲಕ ಮದ್ಯ ಸೇವಿಸಿರುವುದು ತಿಳಿದು ಬಂತು. ಆದರೆ ವಾಹನದಲ್ಲಿ ಯಾವುದೇ ರೋಗಿ ಅಥವಾ ಶವ ಇರಲಿಲ್ಲ. ಆತನ ವಿರುದ್ಧ  ಕೇಸು ದಾಖಲಿಸಿ ವಾಹನ ಸೀಜ್ ಮಾಡಿದ್ದೇವೆಂದು ಪೊಲೀಸರು ಹೇಳಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ರವಿಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದ. ಎರಡು ದಿನಗಳ ಹಿಂದಷ್ಟೆ ಕರ್ತವ್ಯಕ್ಕೆ ಹಾಜರಾಗಿದ್ದ ಪೊಲೀಸರು ಯಾವ ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ವರಿ ನಂತರವೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಫಯೋನಿಕ್ಸ್ ಆ್ಯಂಬುಲೆನ್ಸ್  ವಕ್ತಾರ ಸ್ಪಷ್ಟನೆ ನೀಡಿದ್ದಾರೆ.

ಈ ತಿಂಗಳಲ್ಲಿ ಕುಡಿದು ಚಾಲನೆ ಮಾಡಿ ಸಿಕ್ಕಿ ಹಾಕಿಕೊಂಡ ಎರಡನೇ ಪ್ರಕರಣ ಇದಾಗಿದೆ.
ಎರಡು ವಾರಗಳ ಹಿಂದೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿ, ಆ್ಯಂಬುಲೆನ್ಸ್ ಚಾಲಕನೊಬ್ಬ ಯಾವುದೇ ರೋಗಿ ಇಲ್ಲದಿದ್ದರೂ,  ಜೋರಾಗಿ ಸೈರನ್ ಹಾಕಿಕೊಂಡು , ವೇಗವಾಗಿ ಹೋಗುತ್ತಿದ್ದ. ಈ ವೇಳೆ ಅವನನ್ನು ತಡೆದು ಪರೀಶೀಲಿಸಿದಾಗ ಆತ ಮದ್ಯ ಸೇವಿಸಿರುವುದು ತಿಳಿದು ಬಂದಿತು. ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕೋರ್ಟ್ ಗೆ ಹಾಜರು ಪಡಿಸಲಾಯಿತು, ನಂತರ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕ ಕುಡಿದು ಚಾಲನೆ ಮಾಡುವುದು ರೋಗಿಯ ಆರೋಗ್ಯದ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಇನ್ನೂ ಮುಂದೆ ಆ್ಯಂಬುಲೆನ್ಸ್ ಚಾಲಕರನ್ನು ಪರೀಕ್ಷಿಸಲು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ. ಆದರೆ ರಸ್ತೆಯಲ್ಲಿ ಓಡಾಡುವ ಎಲ್ಲಾ ಆ್ಯಂಬುಲೆನ್ಸ್ ಗಳನ್ನು ತಡೆ ಹಿಡಿದು ಪರೀಕ್ಷೆ ಮಾಡಲಾಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com