ಮೆಟ್ರೋ ರೈಲುಗಳಲ್ಲಿ ಆರು ಭೋಗಿಗಳಿಗೆ ಒಪ್ಪಿಗೆ; ಇನ್ನೊಂದು ವರ್ಷದಲ್ಲಿ ಅನುಷ್ಠಾನ

ಮೆಟ್ರೋ ರೈಲುಗಳಲ್ಲಿ ಹೆಚ್ಚುವರಿ ಭೋಗಿಗಳನ್ನು ಅಳವಡಿಸುವ ಬೇಡಿಕೆಗೆ ಒಪ್ಪಿಗೆ ಸಿಕ್ಕಿದ್ದು, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ (ಬಿ ಎಂ ಆರ್ ಸಿ ಎಲ್) ಈ ನಿಟ್ಟಿನಲ್ಲಿ 150 ಹೆಚ್ಚುವರಿ ಭೋಗಿಗಳ
ಜನನಿಬಿಡ ಮೆಟ್ರೋ ರೈಲು
ಜನನಿಬಿಡ ಮೆಟ್ರೋ ರೈಲು
ಬೆಂಗಳೂರು: ಮೆಟ್ರೋ ರೈಲುಗಳಲ್ಲಿ ಹೆಚ್ಚುವರಿ ಭೋಗಿಗಳನ್ನು ಅಳವಡಿಸುವ ಬೇಡಿಕೆಗೆ ಒಪ್ಪಿಗೆ ಸಿಕ್ಕಿದ್ದು, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ (ಬಿ ಎಂ ಆರ್ ಸಿ ಎಲ್) ಈ ನಿಟ್ಟಿನಲ್ಲಿ 150 ಹೆಚ್ಚುವರಿ ಭೋಗಿಗಳ ಪೂರೈಕೆಗೆ ಅಂತಾರಾಷ್ಟ್ರೀಯ ಟೆಂಡರ್ ಕರೆದಿದೆ. 
ಈ ನಿರ್ಧಾರವನ್ನು ಧೃಢೀಕರಿಸಿರುವ ಬಿ ಎಂ ಆರ್ ಸಿ ಎಲ್ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ "ಈಗ ಇರುವ 50 ರೈಲುಗಳಲ್ಲಿ ಭೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಟೆಂಡರ್ ಕರೆದಿದ್ದೇವೆ" ಎಂದಿದ್ದಾರೆ. 
ಈಗ ಮೆಟ್ರೋ ರೈಲು ಸಂಚಾರದಲ್ಲಿ 50 ರೈಲುಗಳಿದ್ದು, ಪ್ರತಿ ರೈಲಿನಲ್ಲೂ ಮೂರೂ ಭೋಗಿಗಳಿವೆ. "ಪ್ರತಿ ರೈಲಿನ ಭೋಗಿಗಳ ಸಂಖ್ಯೆಯನ್ನು ಮೂರರಿಂದ ಆರಕ್ಕೆ ಏರಿಸಲಿದ್ದೇವೆ. ಆದುದರಿಂದ 50 ರೈಲುಗಳಿಗೆ ಹೆಚ್ಚುವರಿ 150 ಭೋಗಿಗಳನ್ನು ಕೊಳ್ಳಲಿದ್ದೇವೆ" ಎಂದು ಅವರು ಹೇಳಿದ್ದಾರೆ. 
ಒಂದು ಭೋಗಿಗೆ ತಗುಲುವ ವೆಚ್ಚ ಸರಿ ಸುಮಾರು 9 ಕೋಟಿ ಇದ್ದು "ಈ ಯೋಜನೆಗಾಗಿ ಎ ಎಫ್ ಡಿ ನಮಗೆ 1350 ಕೋಟಿ ಸಾಲ ನೀಡುತ್ತಿದೆ" ಎಂದು ಖರೋಲಾ ಹೇಳಿದ್ದಾರೆ. 
ಈ ಯೋಜನೆಯನ್ನು ಸಂಪೂರ್ಣಗೊಳಿಸಲು 12 ರಿಂದ 14 ತಿಂಗಳು ಹಿಡಿಯಲಿದೆಯಂತೆ. ಈ ಡಿಸೆಂಬರ್ ನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು, ನಂತರ ಭೋಗಿಗಳನ್ನು ಒದಗಿಸುವುದಕ್ಕೆ ಅವರಿಗೆ 12 ರಿಂದ 14 ತಿಂಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಖರೋಲಾ ಹೇಳಿದ್ದಾರೆ. 
ಈಗ ಸದ್ಯಕ್ಕೆ ಮೇಟೊದಲ್ಲಿ ದಿನದಲ್ಲಿ 1.7 ಲಕ್ಷದಿಂದ 1.8 ಲಕ್ಷ ಜನ ಓಡಾಡುತ್ತಿದ್ದಾರೆ. "ಪ್ರತಿ ರೈಲು ಸದ್ಯಕ್ಕೆ 960 ಪ್ರಯಾಣಿಕರನ್ನು ಒಳಗೊಳ್ಳಬಹುದಾಗಿದ್ದು, ಆರು ಭೋಗಿಗಳಿಗೆ ವೃದ್ಧಿಸಿದರೆ 1900 ಪ್ರಯಾಣಿಕರನ್ನು ಒಳಗೊಳ್ಳುವ ಸಾಮರ್ಥ್ಯ ಹೊಂದಲಿದೆ" ಎಂದು ಅವರು ಹೇಳಿದ್ದಾರೆ. 
ಹೊಸ ಭೋಗಿಗಳು ಸೇರಿದ ನಂತರ ಪ್ರತ್ಯೇಕ ಮಹಿಳಾ ಭೋಗಿಗಳಿಗೆ ಚಾಲನೆ ನೀಡುವ ಚಿಂತನೆ ಕೂಡ ನಡೆಸಲಾಗುತ್ತಿದೆ. ಈ 6 ಭೋಗಿಗಳ ರೈಲುಗಳನ್ನು ಮೊದಲ ಹಂತದ ಮೆಟ್ರೋನ 42.3 ಕಿಮೀ ಮಾರ್ಗದಲ್ಲಿ ಮಾತ್ರ ಚಲಾವಣೆ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com